Wednesday, January 22, 2025

Latest Posts

Tinderನಲ್ಲಿ ಸ್ನೇಹ, Night Clubನಲ್ಲಿ ದೋಖಾ! – ಬ್ಲೇಡ್ ಹಾಕಿದ್ಳು ಕಿ‘ಲೇಡಿ’

- Advertisement -

ಡೇಟಿಂಗ್ ಆಪ್​​ಗಳು ಅಂತ ಮೊಬೈಲ್​​ನಲ್ಲಿ ಇನ್​ಸ್ಟಾಲ್ ಮಾಡ್ಕೊಂಡು, ಅದ್ರಲ್ಲಿ ಪರಿಚಯ ಆಗೋ ಹುಡುಗಿ ಹಿಂದೆ ಹೋದ್ರೆ ನಿಮ್ಮನ್ನ ಬೀದಿಗೆ ಇಳಿಸಿಬಿಡ್ತಾರೆ. ನಿಮಗೇ ಗೊತ್ತಿಲ್ಲದಂತೆ ನಿಮ್ ಜೇಬು ಒಂದೇ ಗಂಟೆಗಳಲ್ಲಿ ಹೇಗೆಲ್ಲಾ ಖಾಲಿ ಆಗೋಗುತ್ತೆ.

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಒಂದು ದೊಡ್ಡ ಡೇಟಿಂಗ್ ಸ್ಕ್ಯಾಮ್ ಸದ್ದಿಲ್ಲದೇ ನಡೀತಿದೆ. ಡೇಟಿಂಗ್ App​​ನಲ್ಲಿ ಪರಿಚಯ ಆಗೋ ಹುಡುಗಿಯೊಬ್ಬಳು, ತನಗೆ ಗೊತ್ತಿರೋ ಪಬ್ ಒಂದಕ್ಕೆ ಕರೆದುಕೊಂಡು ಹೋಗಿ ಅಮಾಯಕ ಹುಡುಗರ ಪರ್ಸ್ ಹೇಗೆ ಖಾಲಿ ಮಾಡಿಸ್ತಿದ್ದಳು ಅನ್ನೋ ಖತರ್ನಾಕ್ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಮುಂಬೈನ ಅಂಧೇರಿ ಪ್ರದೇಶದಲ್ಲಿ ಗಾಡ್ ಫಾದರ್ ಕ್ಲಬ್ನಲ್ಲಿ ನಡೀತಿದ್ದ ಡೇಟಿಂಗ್ ಸ್ಕ್ಯಾಮ್​ ಬಟಾಬಯಲಾಗಿದೆ.

ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ಬಳಸಿಕೊಂಡು ವಂಚನೆ ಮಾಡ್ತಿರೋದು ಬೆಳಕಿಗೆ ಬರ್ತಿದೆ. ನೈಟ್​​ ಕ್ಲಬ್​​ಗಳು ಹುಡುಗೀರನ್ನ ಬಳಸಿಕೊಂಡು ಅಮಾಯಕರಿಗೆ ವಂಚನೆ ಮಾಡ್ತಿದೆ. ಹತ್ತಾರು ಯುವಕರು ಲಕ್ಷಾಂತರ ಹಣ ಕಳ್ಕೊಂಡಿದ್ದಾರೆ. ಇಲ್ಲಿ ಯುವತಿಯರು ಅಮಾಯಕರಿಗೆ ಹೇಗೆ ಗಾಳ ಹಾಕಿ ಮೋಸ ಮಾಡ್ತಾರೆ ನೋಡಿ.. ಮೊದಲು ನೈಟ್​​ ಕ್ಲಬ್​​ಗಳ ಜೊತೆ ಒಪ್ಪಂದ ಮಾಡಿಕೊಂಡಿರೋ ಹುಡುಗೀರು, ಡೇಟಿಂಗ್ ಆಪ್​​ನಲ್ಲಿ ಹುಡುಗರನ್ನ ಪರಿಚಯ ಮಾಡಿಕೊಳ್ತಾರೆ.. ಹುಡುಗರ ಜೊತೆ ಮೊದಲ ದಿನವೇ ಸಲುಗೆಯಿಂದ ಮಾತನಾಡಿ ಪಬ್​​ಗೆ ಹೋಗೋಣ ಅಂತ ಕರೀತಾರೆ.. ಚೆಂದ ಚೆಂದ ಫೋಟೋಗಳನ್ನ ತೋರಿಸಿ ಮರಳು ಮಾಡಿರ್ತಾರೆ.. ಹುಡುಗಿಯ ಅಂದ ಚಂದ, ಮೋಡಿಯ ಮಾತಿಗೆ ಮರುಳಾಗೋ ಅಮಾಯಕ ಹುಡುಗರು ಅವ್ರನ್ನ ಭೇಟಿ ಆಗೋಕೆ ಹೊರಟಿರ್ತಾರೆ.. ಆಗ್ಲೇ ನಡೆಯೋದು ನಿಜವಾದ ಮೋಸದ ಆಟ.. ಹುಡುಗೀರು ಮೊದಲೇ ತಾವು ಡೀಲಿಂಗ್ ಮಾಡಿಕೊಂಡಿರೋ ನೈಟ್​​ ಕ್ಲಬ್, ಪಬ್​​ಗಳಿಗೆ ಹುಡುಗರನ್ನ ಕರೆದುಕೊಂಡು ಡೇಟಿಂಗ್ ಹೋಗ್ತಾರೆ.. ಅಲ್ಲಿ ಕಾಕ್​ಟೇಲ್, ರೆಡ್​​ ಬುಲ್, ನಾನ್​ ವೆಜ್, ಇಂಥದ್ದನ್ನ ಸಾಕಷ್ಟು ತರಿಸಿಕೊಂಡು ತಿಂತಾರೆ. ನಿಜ ವಿಷಯ ಏನಂದ್ರೆ ಹೊರಗಡೆ 100-200 ರೂಪಾಯಿಗೆ ಸಿಗೋ ಜ್ಯೂಸ್​ ಆ ಪಬ್​​​ನಲ್ಲಿ 1ರಿಂದ 2 ಸಾವಿರ ಬಿಲ್ ಆಗಿರುತ್ತೆ. ಅದೇ ರೀತಿ ಸಾಕಷ್ಟು ಐಟಂಗಳಿಗೆ ಸಾವಿರಗಟ್ಟಲೆ ಬಿಲ್ ಹಾಕಿಸ್ತಾರೆ.. ಹೊರಗಡೆ 1ಸಾವಿರಕ್ಕೆ ಮುಗಿಯೋ ಪಾರ್ಟಿ ಖರ್ಚು ಆ ಕ್ಲಬ್​​ನಲ್ಲಿ 50-60 ಸಾವಿರದ ಗಡಿ ದಾಟಿರುತ್ತೆ.. 1 ಲೀಟರ್ ನೀರಿಗೂ ಇಲ್ಲಿ 200ರೂಪಾಯಿ ಬಿಲ್ ಹಾಕಿರ್ತಾರೆ.. ಹುಡುಗಿಯನ್ನ ನಂಬಿ ಬಂದ ಹುಡುಗನಿಗೆ ಕ್ಲಬ್​​ನವರ ಮೋಸದ ಆಟ ಗೊತ್ತೇ ಆಗಿರಲ್ಲ.. 1 ಸಾವಿರದಷ್ಟು ಬೆಲೆಯದ್ದನ್ನ ತಿಂದು ಕುಡಿದ್ರೆ, ಅಲ್ಲಿನ ಬಿಲ್ ಅರ್ಧ ಲಕ್ಷ ಗಡಿದಾಟಿರುತ್ತೆ.. ವಿಧಿ ಇಲ್ಲದೆ ಅಮಾಯಕ ಹುಡುಗರು ಅಷ್ಟೂ ಬಿಲ್ ಕೊಡಬೇಕಾದ ಪರಿಸ್ಥಿತಿ ಇರುತ್ತೆ.

ಇಷ್ಟೆಲ್ಲಾ ದುಡ್ಡು ಕೊಟ್ಮೇಲಾದ್ರೂ ಹುಡುಗಿ ಸಿಗ್ತಾಳಾ? ಅದು ಕೂಡ ಇಲ್ಲ.. ಕ್ಲಬ್​​ನಲ್ಲಿ ತಿಂದು ಕುಡಿದು ಪಾರ್ಟಿ ಮಾಡಿದ್ಮೇಲೆ ಹುಡುಗಿ ನಂಗೆ ಮೂಡ್ ಸರಿ ಅಂತ ಹೇಳಿಕೊಂಡು ವಾಪಸ್ ಮನೆ ಕಡೆ ಹೊರಟಿರ್ತಾರೆ.. ಹುಡುಗ ಕಡೆಗೆ ಏನೂ ಮಾಡಲಾಗದೆ ಜೇಬು ಖಾಲಿ ಮಾಡ್ಕೊಂಡು ಇಂಗು ತಿಂದ ಮಂಗನಂತೆ ಮನೆಕಡೆ ಹೆಜ್ಜೆ ಹಾಕಿರ್ತಾನೆ..

ಯುವತಿಯರು ಮತ್ತು ನೈಟ್ ಕ್ಲಬ್ ಗಳ ಈ ಮೋಸದಾಟವನ್ನು ಮಹಿಳಾ ವಕೀಲೆ ದೀಪಿಕಾ ನಾರಾಯಣ ಭಾರದ್ವಾಜ್ ಅನ್ನೋರು ಬಯಲಿಗೆಳೆದಿದ್ದಾರೆ. ಮುಂಬೈನ ಗಾಡ್ ಫಾದರ್ ಕ್ಲಬ್​​ನಲ್ಲಿ ನಡೆದ ಹಗರಣವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಬಗ್ಗೆ ಈಗ ದೂರು ಕೂಡ ದಾಖಲಾಗಿದೆ.

ಬೆಂಗಳೂರಲ್ಲಿ ಕೂಡ ಇಂಥದ್ದೇ ಕೆಲ ಹಗರಣಗಳು ಹಲವು ಬಾರಿ ಬೆಳಕಿಗೆ ಬಂದಿದೆ. ಯಾರೋ ಸುಂದರಿ ಸಿಕ್ಳು ಅಂತ ಪರಿಚಯ ಮಾಡ್ಕೊಂಡು ಡೇಟಿಂಗ್ ಅಂತ ಅವ್ರ ಜೊತೆ ಪಬ್, ಕ್ಲಬ್ ಸುತ್ತೋ ಮೊದಲು ಇಂಥಾ ಸ್ಕ್ಯಾಮ್​​ಗಳ ಬಗ್ಗೆ ಎಚ್ಚರದಿಂದಿರಿ..

- Advertisement -

Latest Posts

Don't Miss