ನಟ ವಿಜಯ್‌ ಗೆಲುವಿಗೆ ಕಾರಣವೇನು..? ಚುನಾವಣಾ ಪ್ರಣಾಳಿಕೆಯಲ್ಲಿ ಏನಿತ್ತು..!

ಸಿನಿಮಾ ಸ್ಟಾರ್‌ಗಳು ರಾಜಕೀಯಕ್ಕೆ ಬರೋದು ಇತ್ತೀಚೆಗಿನ ದಿನಗಳಲ್ಲಿ ಟ್ರೆಂಡಿಂಗ್‌ ಆಗಿಬಿಟ್ಟಿದೆ.. ಕೆಲವರು ತಮ್ಮ ನಟನೆಗೆ ಅಭಿಮಾನಿಗಳನ್ನು ಹೊಂದಿದ್ದರೆ ಇನ್ನು ಕೆಲವರು ತಮ್ಮ ವ್ಯಕ್ತಿತ್ವಕ್ಕು ಫ್ಯಾನ್ಸ್‌ ಹೋದಿರುತ್ತಾರೆ ಅನ್ನುವುದಕ್ಕೆ ತಮಿಳು ನಟ ವಿಜಯ್‌ ಸಾಕ್ಷಿ. ಮೊದಲು ಅವಮಾನ ಆದ್ರು ಈಗ ಗೆದ್ದು ಬೀಗಿದ್ದಾರೆ. ಹೌದು, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸಿನಿಮಾ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಚ್ಚರಿ ಗೆಲುವು ದಾಖಲಿಸಿದೆ.

ಇತ್ತೀಚೆಗಷ್ಟೇ ಆರಂಭಗೊಂಡ ಟಿವಿಕೆ ಪಕ್ಷ ಹಲವು ಕಡೆ ಜನಮನ ಸೆಳೆದು ಅವಮಾನ ಟೀಕೆಗು ಒಳಗಾಗಿತ್ತು ಆದ್ರೆ ಎಲ್ಲರಿಗೂ ಇವತ್ತು ತಕ್ಕ ಉತ್ತರ ನೀಡಿದೆ. ಅಷ್ಟಕ್ಕೂ ಟಿವಿಕೆ ಗೆಲುವಿಗೆ ಕಾರಣವೇನು ಅಂತ ನೋಡೋದಾದ್ರೆ ಪ್ರಮುಖವಾಗಿ ಚುನಾವಣಾ ಪ್ರಣಾಳಿಕೆಗಳು ಹೌದು, ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಟಿವಿಕೆ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಯುವಕರಿಗೆ ಹೊಸ ಆಡಳಿತದ ಭರವಸೆ ಮೂಡಿಸಿದ ಜೊತೆಗೆ ಪ್ರಣಾಳಿಕೆ ಮೂಲಕ ಹಲವು ಭರವಸೆಗಳನ್ನೂ ಟಿವಿಕೆ ನೀಡಿತ್ತು. ಮನೆಯ ಯಜಮಾನ್ತಿಗೆ ಮಾಸಿಕ 2,500 ರೂ ಸೇರಿದಂತೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ, ರೈತರಿಗೆ ಭರ್ಜರಿ ಕೊಡುಗೆಗಳನ್ನು ನೀಡುವ ಭರವಸೆಯನ್ನು ನೀಡಲಾಗಿತ್ತು.

ಹಾಗಾದ್ರೆ ಟಿವಿಕೆ ಚುನಾವಣಾ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು ಯಾವ್ಯಾವು ಅಂತ ನೋಡೋದಾದ್ರೆ ಮನೆ ಮತ್ತು ಮಹಿಳೆಯರಿಗೆ ಕೊಡುಗೆಗಳು, ಮನೆಯ ಯಜಮಾನ್ತಿಗೆ ತಿಂಗಳಿಗೆ 2,500 ರೂ ಸಹಾಯಧನ, ಅನ್ನಪೂರ್ಣಿ ಸೂಪರ್ ಸಿಕ್ಸ್ ಸ್ಕೀಮ್ ಮೂಲಕ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್​ಪಿಜಿ ಸಿಲಿಂಡರ್, ವಾರ್ಷಿಕ 5 ಲಕ್ಷ ರೂಗಿಂತ ಕಡಿಮೆ ಆದಾಯವಿರುವ ಕುಟುಂಬದ ಹೆಣ್ಮಗಳ ಮದುವೆಗೆ 8 ಗ್ರಾಮ್ ಚಿನ್ನ ಮತ್ತು ರೇಷ್ಮೆ ಸೀರೆ ಕೊಡುಗೆ.

ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ. ʼವೆಟ್ರಿ ಪ್ರಯಾಣಂ ಸ್ಕೀಮ್ʼ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ. ಕಾಮರಾಜರ್ ಕಲಿವಿ ಉರುದಿ ತಿಟ್ಟಂ ಸ್ಕೀಮ್ ಮೂಲಕ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವಾಗಲು ಪೋಷಕರಿಗೆ ವರ್ಷಕ್ಕೆ 15,000 ರೂ ಸಹಾಯಧನ. ಪ್ರತೀ ನವಜಾತ ಶಿಶುವಿಗೆ ಚಿನ್ನದ ಉಂಗುರ ಮತ್ತು ವೆಲ್ಕಮ್ ಕಿಟ್.
ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯ ವ್ಯವಸ್ಥೆ.

ವಿದ್ಯುತ್ ಮತ್ತು ಅವಶ್ಯಕತೆಗಳು, ಪ್ರತೀ ಮನೆಗೆ 200 ಯುನಿಟ್​ಗಳಷ್ಟು ಉಚಿತ ವಿದ್ಯುತ್, ಎಲ್ಲಾ ಮನೆಗಳಿಗೂ ಉಚಿತ ಕುಡಿಯುವ ನೀರಿನ ಸಂಪರ್ಕ. ಕೃಷಿ ಮತ್ತು ರೈತರಿಗೆ ಬೆಂಬಲ, ಕೃಷಿ ಸಹಕಾರಿ ಬೆಳೆ ಸಾಲಗಳು ಶೇ. 50ರಷ್ಟು ಮನ್ನಾ, ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಕೃಷಿ ಬೆಂಬಲ, ಯುವಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ನೆರವು, ನಿರುದ್ಯೋಗಿಗಳಿಗೆ ಧನಸಹಾಯ ನೀಡಲಾಗುತ್ತದೆ.

ಪದವೀಧರರಿಗೆ ತಿಂಗಳಿಗೆ 4,000 ರೂ, ಹಾಗು ಡಿಪ್ಲೊಮಾ ಆದವರಿಗೆ ತಿಂಗಳಿಗೆ 2,000-2,500 ರೂ ನೆರವು. 5 ಲಕ್ಷ ಯುವಕರಿಗೆ ಸ್ಟೈಪೆಂಡ್ ಜೊತೆಗೆ ಇಂಟರ್ನ್​ಶಿಪ್. 5 ಲಕ್ಷ ಹೊಸ ಸರ್ಕಾರಿ ನೌಕರಿಗಳು, 20 ಲಕ್ಷ ರೂವರೆಗೆ ಅಡಮಾನರಹಿತ ಶಿಕ್ಷಣ ಸಾಲ, ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತವಾದ ಎಐ ಶಕ್ತ ಕೋಚಿಂಗ್ ಸೌಲಭ್ಯ, ನೂರು ಕಾಮರಾಜರ್ ಶಾಲೆಗಳು, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ, ವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ಮಾಸಿಕ 3,000 ರೂ ಪಿಂಚಣಿ, ಪ್ರತೀ ಕುಟುಂಬಕ್ಕೆ 25 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ.

ಆಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯ. ತಮಿಳುನಾಡನ್ನು ಮಾದಕವಸ್ತು ಮುಕ್ತ ಮಾಡಲು ವಿವಿಧ ಕ್ರಮಗಳು, ಮೀನುಗಾರರಿಗೆ ಕೊಡುಗೆಗಳು, ಮೀನುಗಾರಿಕೆ ಕಡಿಮೆ ಇರುವ ಸೀಸನ್​ನಲ್ಲಿ ಮೀನುಗಾರರಿಗೆ 27,000 ರೂ ಸಹಾಯಧನ, ಮೀನುಗಾರಿಕೆ ದೋಣಿಗೆ ಬಳಸುವ ಡೀಸಲ್​ಗೆ ಸಬ್ಸಿಡಿ, 25 ಲಕ್ಷ ರೂ ಅಪಘಾತ ವಿಮೆ, ಮೀನುಗಾರರಿಗೆ ಖಾಯಂ ವಸತಿ.

About The Author