ಕರೊನಾ ಕಾರಣದಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಈ ಬಾರಿ ಯುಎಇಗೆ ಶಿಫ್ಟ್ ಆಗಿದ್ದು ಆಟಗಾರರು ಕಠಿಣಾಭ್ಯಾಸದಲ್ಲಿ ತೊಡಗಿದ್ದಾರೆ. ಈ ನಡುವೆ ಶನಿವಾರ 12ನೇ ಆವೃತ್ತಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಥೀಮ್ ಕ್ಯಾಂಪೇನ್ ರಿಲೀಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿಡಿಯೋವೊಂದನ್ನ ರಿಲೀಸ್ ಮಾಡಿದ್ದು ಇದರಲ್ಲಿ, ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲಿ, ಕಾಲೋನಿಗಳಲ್ಲಿ, ವಿಡಿಯೋ ಕಾಲ್ ಮೂಲಕ, ಶಾಪ್ಗಳಲ್ಲಿ ಹೀಗೆ ಹಲವೆಡೆ ಮುಂಬೈ ಇಂಡಿಯನ್ಸ್ ಚೀರ್ ಅಪ್ ಮಾಡುವ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.
ನಾವು ಒಂದೇ ಕುಟುಂಬ. ನಾವು ಮುಂಬೈ ಇಂಡಿಯನ್ಸ್ ಎಂಬ ಸಂದೇಶದೊಂದಿಗೆ ಕೊನೆಗೊಳ್ಳೋ ಈ ವಿಡಿಯೋ ರಿಲೀಸ್ ಆದ 24 ಗಂಟೆಯೊಳಗಾಗಿ 2 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ




