Wednesday, November 26, 2025

Latest Posts

Mumbai News: ಕಾಳಿ ಪ್ರತಿಮೆಗೆ ಮೇರಿ ಮಾತೆ ವೇಷ ಹಾಕಿದ ಅರ್ಚಕ ಬಂಧನ

- Advertisement -

Mumbai: ಮುಂಬೈನ ಕಾಳಿ ದೇವಿ ದೇವಸ್ಥಾನದಲ್ಲಿ ಕಾಳಿ ಪ್ರತಿಮೆಗೆ ಮದರ್ ಮೇರಿ ವೇಷ ಹಾಕಲಾಗಿತ್ತು. ಈ ಕಾರಣಕ್ಕೆ ದೇವಸ್ಥಾನದ ಅರ್ಚಕನನ್ನು ಬಂಧಿಸಲಾಗಿದೆ.

ಚೆಂಬೂರ್ ಪ್ರದೇಶದ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಇಂದು ದೇವಸ್ಥಾನಕ್ಕೆ ಬಂದಿದ್ದ ಭಕ್ತರು ದೇವಿ ವೇಷ ಕಂಡು ಆತಂಕಕ್ಕೀಡಾಗಿದ್ದಾರೆ. ಬಳಿಕ ಇದು ಅರ್ಚಕರ ಕೆಲಸವೆಂದು ತಿಳಿದು, ಆಡಳಿತ ಮಂಡಳಿಗೆ ಈ ಬಗ್ಗೆ ದೂರು ನೀಡಲಾಯಿತು.

ವಿಷಯ ತಿಳಿದ ತಕ್ಷಣ ಹಿಂದೂ ಸಂಘಟನೆಯವರು ಬಂದು ಪ್ರತಿಭಟನೆ ನಡೆಸಿದರು. ಆ ಸಮಯಕ್ಕೆ ಸ್ಥಳಕ್ಕೆ ಬಂದ ಪೋಲೀಸರು, ಅರ್ಚಕನನ್ನು ವಿಚಾರಿಸಿದಾಗ, ಕನಸಿನಲ್ಲಿ ಬಂದ ಕಾಳಿ ಮಾತೆ ನನಗೆ ಮದರ್ ಮೇರಿ ವೇಷ ಹಾಕಲು ಹೇಳಿದಳು. ಅದಕ್ಕೆ ಹಾಕಿದೆ ಎಂದಿದ್ದಾನೆ. ಸದ್ಯ ಅರ್ಚಕನನ್ನು ಪೋಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss