ಮುಂಬೈ:ಆರ್ಸಿಬಿ ಅಭಿಮಾನಿಗಳು, ಆಟಗಾರರ ಪ್ರಾರ್ಥನೆ ಫಲ ಸಿಕ್ಕಿದ್ದು ಅರ್ಸಿಬಿ ಪ್ಲೇ ಆಫ್ ಗೆ ಎಂಟ್ರಿಕೊಟ್ಟಿದೆ. ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರ ಫಲ ಆರ್ಸಿಬಿ 15ನೇ ಆವೃತ್ತಿಯಲ್ಲಿ ಪ್ಲೇ ಆಫ್ಗೇರಿತು.
ಡೆಲ್ಲಿ ತಂಡ ಗೆಲ್ಲಬೇಕಾದ ಪಂದ್ಯವನ್ನು ಕೈಚೆಲ್ಲಿ ಟೂರ್ನಿಯಿಂದ ಹೊರ ಬಿತ್ತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು.
ಪೃಥ್ವಿ ಶಾ 24, ಡೇವಿಡ್ ವಾರ್ನರ್ 5, ಮಿಚೆಲ್ ಮಾರ್ಷ್ 0, ರಿಷಭ್ ಪಂತ್ 39, ರೊವಮನ್ ಪೊವೆಲ್ 43, ಅಕ್ಷರ್ ಪಟೇಲ್ 19 ರನ್ ಗಳಿಸಿದರು. ಮುಂಬೈ ಪರ ಬುಮ್ರಾ 3 ವಿಕೆಟ್ ಪಡೆದರು.
160 ರನ್ ಗುರಿ ಬೆನ್ನತ್ತಿದ ಮುಂಬೈ ಪರ ಇಶನ್ ಕಿಶನ್ 48, ರೋಹಿತ್ ಶರ್ಮಾ 2, ಡೇವಾಲ್ಡ್ ಬ್ರೇವಿಸ್ 37, ತಿಲಕ್ ವರ್ಮಾ 21, ಟಿಮ್ ಡೇವಿಡ್ 34, ರಮಣದೀಪ್ ಸಿಂಗ್ ಅಜೇಯ 13 ರನ್ ಗಳಿಸಿದರು.
ನೊರ್ಟ್ಜೆ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಮುಂಬೈ 19.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವಿನ ದಡ ಸೇರಿತು. ಜಸ್ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.
ಸೇಡು ತೀರಿಸಿಕೊಂಡ ಮುಂಬೈ: 2018ರ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಮುಂಬೈ ತಂಡವನ್ನು ಸೋಲಿಸಿತ್ತು. ಇಂದು ನಿರ್ಣಾಯಕ ಕದನದಲ್ಲಿ ಡೆಲ್ಲಿ ವಿರುದ್ಧ ಗೆಲ್ಲುವ ಮೂಲಕ ಮುಂಬೈ ಸೇಡು ತೀರಿಸಿಕೊಂಡಿದೆ.