Sunday, December 22, 2024

Latest Posts

Muncipality: ವಾರ್ಡ್ ಸಮಿತಿ ರಚನೆಯಲ್ಲಿ ನೀರಸ ಪ್ರತಿಕ್ರಿಯೆ: ಬೇಕಾಬಿಟ್ಟಿಯಾಗಿ ನಡೆಯಿತಾ ಪಾಲಿಕೆ..?

- Advertisement -

ಹುಬ್ಬಳ್ಳಿ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ಮುಂಚೂಣಿಗೆ ಬಂದಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸರಣಿ ವರದಿಗಳನ್ನು ಮಾಡಿ ವಾರ್ಡ್ ಸಮಿತಿ ರಚನೆಗೆ ಒತ್ತಾಯಿಸಿತ್ತು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ರಚನೆ ಮಾಡಲು ಮುಂದಾಗಿದ್ದು, ಜನರ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೌದು..ಅವಳಿನಗರದ ಅಭಿವೃದ್ಧಿಯಲ್ಲಿ ನಾಗರಿಕರ ಸಹಭಾಗಿತ್ವವನ್ನು ಬಯಸುವ ವಾರ್ಡ್ ಸಮಿತಿಗಳ ರಚನೆಗೆ ನಿವಾಸಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಾರಿ ಕೇವಲ 436 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 82 ವಾರ್ಡ್‌ಗಳಿಗೆ 820ಕ್ಕೂ ಹೆಚ್ಚು ಆರ್ಜಿಗಳು ಬರಬೇಕಿತ್ತು. ವಾರ್ಡ್ ಸಮಿತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 1 ಕೊನೆಯ ದಿನವಾಗಿತ್ತು. ಈ ಸಂಬಂಧ ಜೂನ್ 30ರಂದೇ ಹು-ಧಾ ಮಹಾನಗರ ಪಾಲಿಕೆ ಸುತ್ತೋಲೆ ಹೊರಡಿಸಿತ್ತು. ಆದರೆ, ನಿಗದಿತ ಸದಸ್ಯರ ಸಂಖ್ಯೆಗಿಂತ ಕಡಿಮೆ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಈಗ ಬಂದಿರುವ 436 ಅರ್ಜಿಗಳ ಸಂಖ್ಯೆಯೂ ಪರಿಶೀಲನೆ ಬಳಿಕ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳೂ ಇವೆ. ಸ್ಥಾನ ಮೀಸಲಾತಿಯನ್ನು ಪರಿಗಣಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಅರ್ಧಕ್ಕಿಂತ ಹೆಚ್ಚು ಸದಸ್ಯ ಸ್ಥಾನಗಳು ಖಾಲಿ ಉಳಿಯುವುದು ನಿಶ್ಚಿತ.

ಇನ್ನೂ ಸದಸ್ಯ ಸ್ಥಾನಗಳು ಖಾಲಿ ಉಳಿಯುವುದನ್ನು ಮಾನ್ಯ ಮಾಡಲಾಗುವುದೋ? ಸಮರ್ಪಕವಾಗಿ 10ಕ್ಕೆ 10 ಅರ್ಜಿಗಳಿರುವ ವಾರ್ಡ್‌ಗಳಲ್ಲಿ ಮಾತ್ರ ಸಮಿತಿ ರಚನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆಯೋ? ಸದಸ್ಯ ಸ್ಥಾನಗಳಿಗಿಂತ ಕಡಿಮೆ ಸಂಖ್ಯೆಯ ಅರ್ಜಿಗಳು ಬಂದಿರುವ ವಾರ್ಡ್‌ಗಳಲ್ಲಿ ಮಂಗಳೂರು ಮಾದರಿಯಂತೆ ಸಮಿತಿ ರಚನೆ ಮಾಡಲಾಗುತ್ತದೆಯೋ? ಎಂಬುದರ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಳಿ ಸ್ಪಷ್ಟತೆ ಇಲ್ಲ.

2 ವರ್ಷಗಳ ಹಿಂದೆ ಮೊದಲ ಬಾರಿ ವಾರ್ಡ್ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಿದ್ದಾಗ 626 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳನ್ನು ಹೊಸದಾಗಿ ಸುತ್ತೋಲೆ ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಮೊದಲಿಗಿಂತ ಈ ಬಾರಿ ಇನ್ನು ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವುದು ವಿಪರ್ಯಾಸ.

ಅರ್ಜಿ ಸಲ್ಲಿಸುವಲ್ಲಿ ನಾಗರಿಕರು ನಿರಾಸಕ್ತಿ ತೋರಿರುವುದಕ್ಕೆ ಪಾಲಿಕೆಯೇ ಹೊಣೆ. ನಾಗರಿಕರನ್ನು ಉತ್ತೇಜಿಸುವ ರೀತಿಯಲ್ಲಿ ಪಾಲಿಕೆಯು ಕನಿಷ್ಠ ಮಟ್ಟದ ಪ್ರಚಾರವನ್ನು ಕೈಗೊಳ್ಳಲಿಲ್ಲ. ಅರ್ಜಿ ಸಲ್ಲಿಸಿ ಎಂದು ಪತ್ರಿಕಾ ಪ್ರಕಟಣೆ ನೀಡಿರುವುದನ್ನು ಬಿಟ್ಟರೆ ಬೇರೆ ಯಾವುದೇ ಹೆಜ್ಜೆ ಗುರುತುಗಳು ಇರಲಿಲ್ಲ. ಈ ಸಂಬಂಧ ವಲಯ ಕಚೇರಿಗಳಲ್ಲಿ ಬ್ಯಾನ‌ ಸಹ ಹಾಕಿರಲಿಲ್ಲ. ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಮೂಲಕ ಆಡಿಯೋ ಪ್ರಸಾರ (ಜಿಂಗಲ್ಸ್) ಮಾಡಬೇಕೆಂಬ ಸಾಮಾನ್ಯಜ್ಞಾನವೂ ಇಲ್ಲದೇ ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗದ ಸಲಹೆಯನ್ನು ಸಹ ಜಾರಿಗೆ ತಂದಿರಲಿಲ್ಲ.

Unexpected visit: ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ತಹಸಿಲ್ ಕಚೆರಿಗೆ ಧಿಡೀರ್ ಭೇಟಿ ನೀಡಿದ ಡಿಸಿ.ಎಸ್ಪಿ.

Siddaramaiah: ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದೇ ಹಿಂದಿನ ಸರ್ಕಾರದ ಕೊಡುಗೆ

Siddaramaiah Challange: ತಾಕತ್ತಿದ್ದರೆ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಜಾರಿ ಮಾಡಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

- Advertisement -

Latest Posts

Don't Miss