ರಾಜಕೀಯ ಸುದ್ದಿ: ನಿನ್ನೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಿಬಿಎಂಪಿ ಕಾರ್ಪೊರೇಟರ್ ವೇಲು ನಾಯ್ಕರ್ ಅವರು ಈ ಮೊದಲು ಮಾಜಿ ಸಚಿವರಾದ ಮುನಿರತ್ನ ಅವರ ಬೆಂಬಲಿಗರಾಗಿದ್ದರು. ಮುನಿರತ್ನ ಅವರು ಸಚಿವರಾಗಿದ್ದಾಗ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಎಂದು ಆರೋಪಿಸಿದರು.
ಮಾಜಿ ಸಚಿವ ಮುನಿರತ್ನ ಅವರು ಸಚಿವರಾಗಿದ್ದಾಗ ಜನರನ್ನು ಹೆದರಿಸಿ ಹನಿಟ್ರ್ಯಾಪ್ ಮಾಡುತಿದ್ದರು ಅದಕ್ಕಾಗಿ ಅವರು ಸ್ಟುಡಿಯೋವನ್ನು ಮಾಡಿಕೊಂಡಿದ್ದಾರೆ ಇನ್ನು ಇವರ ಸ್ಟುಡಿಯೋಗಳು ಜೆಪಿ ಪಾರ್ಕ ಡಾಲರ್ಸ್ ಕಾಲನಿಯಲ್ಲಿವೆ ಜನರನ್ನು ಸ್ಟುಡಿಯೋಗೆ ಕರೆಸಿ ಹೆದರಿಸುವುದು ಬೆದರಿಸುವುದು ಮಾಡುತ್ತಿದ್ದರು ಅವರು ಸಿನಿಮಾ ನಿರ್ಮಾಪಕಲ್ಲವೇ ಹೆದರಿಸುತ್ತಾರೆ ಎಂದರು.
ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೆ ಸ್ಥಳಿಯ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ ಆಡಳಿತ ಕಾಂಗ್ರೆಸ್, ಸದ್ದಿಲ್ಲದೆ ಚುನಾವಣೆಗೆ ಆಪರೆಷನ್ ಕೈ ಸ್ಥಾಪಿಸಿದ್ದಾರೆ., ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಡಿಕೆ ಸುರೇಶ್ ಅವರು ಆರ್ ಆರ್ ನಗರದ ಮುನಿರತ್ನ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುನಿರತ್ನನ ಬೆಂಬಲಿಗರಾದ ಬಿಬಿಎಂಪಿ ಮಾಜಿಸದಸ್ಯರುಗಳಾದ ವೇಲು ನಾಯ್ಕರ್ , ಮೋಹನ್ ಕುಮಾರ್ ಶ್ರೀನಿವಾಸ್ ಮೂರ್ತಿ ಜುಲೈ 23 ರಂದು ಬಿಜೆಪಿಗೆ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಇದು ಮುನಿರತ್ನಗೆ ಇನ್ನೊಂದು ಶಾಕ್ ಕೊಟ್ಟಿದೆ.
Subhramanya Rain : ಕುಕ್ಕೆ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಮುಳುಗಡೆ


