Political News: ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರು SSLC ವಿದ್ಯಾರ್ಥಿಯ ಮೇಲೆ ಸಾಯುವಂತೆ ಹಲ್ಲೆ ಮಾಡಿದ್ದು, ಆತ ಹತ್ಯೆಗೀಡಾಗಿದ್ದಾನೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಕೊಲೆ ಅತ್ಯಂತ ಆಘಾತಕಾರಿ ಅಪರಾಧಿಕ ಕೃತ್ಯ! ಇದು ಕೇವಲ ಒಂದು ಕೊಲೆಯಲ್ಲ; ರಾಜ್ಯದ ಕಾನೂನು ಸುವ್ಯವಸ್ಥೆಯ ದುರಂತಮಯ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಹೋಗುವ ಬಾಲಕನನ್ನು, ಅನ್ಯ ಕೋಮಿನ ಗೂಂಡಾಗಳು, ಗಾಂಜಾ ಮತ್ತಿನಲ್ಲಿ, ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿ ಕೊಲೆಮಾಡಲಾಗದೆ ಎನ್ನಲಾಗುತ್ತಿದ್ದು, ಇದು ನಿಜಕ್ಕೂ ಆತಂಕಕಾರಿಯಾಗಿದೆ. ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಪಿಡುಗಿನ ಬಗ್ಗೆ ಜನರು ಮೇಲಿಂದ ಮೇಲೆ ದೂರು ನೀಡಿದ್ದರೂ, ಮುಂಜಾಗ್ರತೆ ವಹಿಸಿಲ್ಲ, ಅಗತ್ಯ ಕ್ರಮ ಕೈಗೊಳ್ಳಲಿಲ್ಲ ಅಂದ್ರೆ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ತೋರುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಒಬ್ಬ ಮುಗ್ಧ ಅಮಾಯಕ ಬಾಲಕನ ಸಾವಿಗೆ ಈ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ! ಮೊದಲು ತಪ್ಪಿತಸ್ಥ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇನೆ. ಜನರ ತಾಳ್ಮೆಗೂ ಒಂದು ಮಿತಿ ಇದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲಿ ಎಂದು ಆಗ್ರಹಿಸುತ್ತೇನೆ. ಮೃತ ಬಾಲಕನ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.




