- Advertisement -
Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಮಾಡಿದ್ದ ಹಂತಕ ಫಯಾಜ್ ನ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ನೇಹಾ ಹಿರೇಮಠಗೆ ನ್ಯಾಯ ಒದಗಿಸುವ ಕೆಲಸ ಆಗಿದೆ. ಹೈಕೋರ್ಟ್ ನಿರ್ಧಾರ ನಿಜಕ್ಕೂ ನಮಗೆಲ್ಲ ಖುಷಿ ತಂದಿದೆ ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಫಯಾಜ್ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾ ಮಾಡಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನೇಹಾ ಹಂತಕನ ಪರವಾಗಿ ಮುಸ್ಲಿಂ ವಕೀಲರು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಲ್ಲಿ ಕೂಡ ತಿರಸ್ಕೃತಗೊಂಡ ಬೆನ್ನಲ್ಲೇ ಹೈಕೋರ್ಟ್ ಗೆ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಕೂಡ ಈಗ ವಜಾ ಮಾಡಿದೆ ಎಂದರು.
ನೇಹಾ ಹಿರೇಮಠ ಕೊಲೆಯ ಹಂತಕನಿಗೆ ಗಲ್ಲು ಶಿಕ್ಷೆ ಆಗಬೇಕು. ಜಾಮೀನು ಕೊಟ್ಟು ಹೊರಗೆ ತಂದರೇ ನೂರಾರು ಹಂತಕ ಫಯಾಜ್ ಗಳು ಹುಟ್ಟಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
- Advertisement -

