- Advertisement -
www.karnatakatv.net: ರಾಜ್ಯ- ವಿಜಯನಗರ- ಹೂವಿನಹಡಗಲಿ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಸತತ 31 ವರ್ಷಗಳ ಕಾಲ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ರು. ತಮ್ಮ ಕಂಚಿನ ಕಂಠದಿಂದ 3 ದಶಕಗಳಿಂದ ಪುರಾಣ ಪ್ರಸಿದ್ದ ಮೈಲಾರ ಕಾರ್ಣಿಕವನ್ನ ಗೊರವಯ್ಯ ಮಾಲತೇಶಪ್ಪ ನುಡಿಯುತ್ತಿದ್ರು. ಇನ್ನು, ಸಂಕಷ್ಟದಲ್ಲಿದ್ದ ಮಾಲತೇಶಪ್ಪನಿಗೆ ಮನೆ ನಿರ್ಮಿಸುವ ಆಸೆಯಿತ್ತು, ಇದಕ್ಕೆ ನಾಡಿನ ಜನರು ಅವರಿಗೆ ಸಹಾಯ ಹಸ್ತ ಚಾಚಿದ್ರು. ಆದ್ರೆ, ಮನೆ ನಿರ್ಮಾಣವಾಗುವ ಮೊದಲೇ ಗೊರವಯ್ಯ ಇಹಲೋಕ ತ್ಯಜಿಸಿದ್ದಾರೆ.
- Advertisement -