Mysoor News:
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಶ್ರೀರಾಂಪುರ ಮಹಾಶಕ್ತಿ ಕೇಂದ್ರದ ಅಂಚ್ಯಾ ಸಾತಗಳ್ಳಿ
ಮಾನಸಿ ನಗರದ ಬಡಾವಣೆಯಲ್ಲಿ ಬೂತ್ ವಿಜಯ ಅಭಿಯಾನದಲ್ಲಿ ಭಾಗವಹಿಸಿ ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜವನ್ನು ಕಟ್ಟಿ ಮಾತನಾಡಿದ ಅವರು ಬೂತ್ ಮಟ್ಟದಲ್ಲಿ ಗೆದ್ದಲ್ಲಿ ಮಾತ್ರ ಕ್ಷೇತ್ರ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಬೂತ್‌ಗಳನ್ನು ಸದೃಢಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಮಾಜಿ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘2018ರ ವಿಧಾನಸಭಾ ಚುನಾವಣೆಯ ಪ್ರನಾಳಿಕೆಯಲ್ಲಿನ ಭರವಸೆಗಳಲ್ಲಿ ಬಹುತೇಕ ಬಿಜೆಪಿ ಈಡೇರಿಸಿದೆ. ಇದನ್ನು ಮತದಾರರಿಗೆ ಮುಟ್ಟಿಸುವ ಕೆಲಸದ ಜತೆಗೆ ಮತ್ತೊಮ್ಮೆ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಬೇಕಿದೆ. ಬೂತ್‌ಗಳನ್ನು ಹೆಚ್ಚು ಸಕ್ರಿಯಗೊಳಿಸಿದಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಾಗಲಿದೆ’ ಎಂದರು.
‘ಬೂತ್ ಸಮಿತಿ, ಪಂಚರತ್ನ, ಕೀ ಮತದಾರರು, ಪೇಜ್ ಪ್ರಮುಖ್, ಸಾಮಾಜಿಕ ಜಾಲತಾಣ ತಂಡಗಳ ರಚನೆ ಮಾಡಲಾಗಿದೆ. ಇದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ, ಕಾರ್ಯಕ್ರಮಗಳ ಮಾಹಿತಿಯನ್ನು ಮತದಾರರಿಗೆ ಮುಟ್ಟಿಸಲಾಗುವುದು’ ಎಂದು ಹೇಳಿದರು, ಸಂಘಟನಾತ್ಮಕ ವಿಷಯ ಪ್ರಸ್ಥಪಿಸಿದರು ಹಾಗು ಹಾಲಿ ಶಾಸಕರನ್ನು ತರಾಟೆಗೆ ತೆಗೆದುಕೊಂಡು ಕಾರ್ಯಕರ್ತರ ಗಮನ ಸೆಳ್ಳೇದರು
ಇದೇ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಡನಹಳ್ಳಿ ಸುರೇಶ ಮಾಜಿ ವಸ್ತು ಪ್ರರ್ಶನ ಪ್ರಾಧಿಕಾರದ ಅಧ್ಯಕ್ಷರು ಹೇಮಂತ್ ಕುಮಾರ್ ಗೌಡ ಮಾಜಿ ಜಿಲ್ಲಾ ಅಧ್ಯಕ್ಷರು ಮಹೇಂದ್ರ, ಮಾಜಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರು ಗೊರೂರು ಶಿವು ,ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಚೇತನ್ , ಗೊರೂರು ನಜುಂಡ ಸ್ವಾಮಿ , ಮುಖಂಡರಾದ ಹಂಚ್ಯಾ ರವಿಕುಮಾರ್ , ಸಾತಗಳ್ಳಿ ರವಿ , ಲಕ್ಷ್ಮನಾರಾಯಣಆಚಾರ್, ಬೂತ್ ಅಧ್ಯಕ್ಷರುಗಳಾದ ಪಿ. ಚಂದ್ರುಶೇಖರ್ ಹಾಗು ಎಂ. ಹರೀಶ್ ಸಂಜು ನಾಗರಾಜು ಡೈರಿ ರಾಜಪ್ಪ ಯಜಮಾನ್ ಮಹದೇವಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
‘ಮಂಡ್ಯಕ್ಕೆ ಭಾವೈಕ್ಯತಾ ಜಾಥ’.ಮಂಗಳೂರಿನಿಂದ ಬೆಂಗಳೂರಿಗೆ ನಡೆಯುತ್ತಿರುವ ಜಾಥಾ