Friday, December 27, 2024

Latest Posts

ಸೇಡು ತೀರಿಸಿಕೊಂಡ ಮೈಸೂರು ವಾರಿಯರ್ಸ್ 

- Advertisement -

ಬೆಂಗಳೂರು:  ಪವನ್ ದೇಶಪಾಂಡೆ ಅಮೋಘ ಅರ್ಧ ಶತಕದ ನೆರೆವಿನಿಂದ ಮೈಸೂರು ವಾರಿಯರ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಮೈಸೂರು ವಾರಿಯರ್ಸ್ ಸೋಲಿನ ಸೇಡು ತೀರಿಸಿಕೊಂಡಿದೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ  ಟಾಸ್ ಗೆದ್ದ ಮೈಸೂರು ಫೀಲ್ಡಿಂಗ್ ಆಯ್ದುಕೊಂಡಿತು. ಮಂಗಳೂರು ತಂಡದ ಪರ ನಾಯಕ ಸಮರ್ಥ್ (22), ನೊರೊನ್ಹ (0) ಉತ್ತಮ ಆರಂಭ ಕೊಡುವಲ್ಲಿ ಎಡವಿದರು.

ಪ್ರತೀಕ್ ಜೈನ್ ಆರಂಭದಲ್ಲಿ 2 ವಿಕೆಟ್ ಪಡೆದು ಆಘಾತ ನೀಡಿದರು.  ನಾಲ್ಕನೆ ಕ್ರಮಾಂಕದಲ್ಲಿ ಬಂದ ಅನೀಶ್ವರ್ ಗೌತಮ್ 5 ರನ್ ಗಳಿಸಿ ರನೌಟ್ ಆದರು. ಐದನೆ ವಿಕೆಟ್‍ಗೆ ಜೊತೆಗೂಡಿದ ನಿಕಿನ್ ಜೋಸ್ ಹಾಗೂ ಅಭಿನವ್ ಮನೋಹರ್ 90 ರನ್‍ಗಳ ಜೊತೆಯಾಟ ನೀಡಿ ತಂಡಕ್ಕೆ  ಮೊತ್ತ ಹೆಚ್ಚಿಸಿದರು.

ನಿಕಿನ್ ಜೋಸ್ 43 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರೆ ಮನೋಹರ್ 30 ಎಸೆತದಲ್ಲಿ  ಅರ್ಧ ಶತಕ ಸಿಡಿಸಿದರು. ನಿಕಿನ್ ಜೋಸ್ 55 ರನ್ ಗಳಿಸಿದ್ದಾಗ ಗೊಯಲ್ ಎಸೆತದಲ್ಲಿ  ಎಲ್‍ಬಿ ಬಲೆಗೆ ಬಿದ್ದರು. 5 ಬೌಂಡರಿ 5 ಸಿಕ್ಸರ್ ಸಿಡಿಸಿದ ಅಭಿನವ್ ಮನೋಹರ್ (68 ರನ್) ವಿದ್ಯಾಧರ್ ಪಾಟೀಲ್‍ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಅಮಿತ್ ವರ್ಮಾ 5, ಆದಿತ್ಯ ಸೋಮಣ್ಣ 3, ಶರತ್ ಅಜೇಯ 1 ರನ್ ಗಳಿಸಿದರು. ಮಂಗಳೂರು ಯುನೈಟೆಡ್ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟೆಕ್ಕೆ 171  ರನ್ ಗಳಿಸಿತು.  ಪ್ರತೀಕ್ ಜೈನ್ ಹಾಗೂ ಆದಿತ್ಯ ಗೊಯಲ್ ತಲಾ 2 ವಿಕೆಟ್ ಪಡೆದರು.

172 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಮೈಸೂರು ವಾರಿಯರ್ಸ್‍ಗೆ ನಿಹಾಲ್ ಉಳ್ಳಾಲ್ (25) ಹಾಗೂ ನಿತಿನ್ ಬ್ಹಿಲೆ (11) ಮೊದಲ ವಿಕೆಟ್‍ಗೆ 27 ರನ್ ಗಳಿಸಿದರು. ನಿಹಾಲ್ ವೆಂಕಟೇಶ್ ಎಸೆತದಲ್ಲಿ ಬೌಲ್ಡ್ ಆದರು. ನಿತೀನ್ ಶರತ್‍ಗೆ ವಿಕೆಟ್ ಒಪ್ಪಿಸಿದರು. ಮೂರನೆ ವಿಕೆಟ್‍ಗೆ ಜೊತೆಗೂಡಿದ ನಾಯಕ ಕರುಣ್ ನಾಯರ್ 47, ಪವನ್ ದೇಶಪಾಂಡೆ ಜೇಯ 53 ರನ್ ಗಳಿಸಿದರು.

ಪವನ್ ದೇಶಪಾಂಡೆ  33 ಎಸೆತದಲ್ಲಿ ಅ`ರ್À ಶತಕ ಸಿಡಿಸಿದರು.  ಶ್ರೇಯಸ್ ಗೋಪಾಲ್ 6, ಶಿವರಾಜ್ ಅಜೇಯ 21 ರನ್ ಗಳಿಸಿದರು. ಪವನ್ ದೇಶಪಾಂಡೆ 35 ಎಸೆತದಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 53 ರನ್ ಗಳಿಸಿದರು. ಮೈಸೂರು ತಂಡ 18.1 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಶರತ್ ಹಾಗೂ ವೆಂಕಟೇಶ್ ತಲಾ 2 ವಿಕೆಟ್ ಪಡೆದರು.

 

ಸಂಕ್ಷಿಪ್ತ ಸ್ಕೋರ್

ಮಂಗಳೂರು ಯುನೈಟೆಡ್ 171/7

ನಿಕಿನ್ ಜೋಸ್ 55, ಅಭಿನವ್ ಮನೋಹರ್ 68

ಪ್ರತೀಕ್ ಜೈನ್ 31ಕ್ಕೆ 2, ಆದಿತ್ಯ ಗೋಯಲ್ 41ಕ್ಕೆ2

ಮೈಸೂರು ವಾರಿಯರ್ಸ್  172/4

ಪವನ್ ದೇಶಪಾಂಡೆ ಅಜೇಯ 53, ಕರುಣ್ ನಾಯರ್ 43

ವೆಂಕಟೇಶ್ 20ಕ್ಕೆ 2, ಶರತ್ 32ಕ್ಕೆ 2

- Advertisement -

Latest Posts

Don't Miss