Monday, December 23, 2024

Latest Posts

ಹಣ ಕೊಟ್ಟು ಜನರನ್ನು ಸಮಾವೇಶಕ್ಕೆ ಜನರನ್ನು ಕರೆಸಿದ್ದಾರೆ

- Advertisement -

Bangalore news

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಂದ ನಾ ನಾಯಕಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಈ ಸಮಾವೇಶವನ್ನು ಮುಖ್ಯವಾಗಿ ಮಹಿಳೆಯರಿಗಾಗಿಯೇ ಹಮ್ಮಿಕೊಳ್ಳಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶದಲ್ಲಿ ಭಾಗವಹಿಸಿದ್ದರು.ಇನ್ನು ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಲವಾರು ನಾಯಕಿಯರು ಆಗಮಿಸಿದ್ದರು . ಇನ್ನು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಕಾಂಗ್ರೆಸ್ ನಾಯಕಿ ಶ್ರೀ ಮತಿ ಪ್ರಿಯಾಂಕಾ ಗಾಂಧಿ ಆಗಮಿಸಿದ್ದರು . ವೇದಿಕೆಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ದೀಪ ಬೆಳಗಿಸುವುದರ ಮೂಲಕ ಸಭೆಯನ್ನು ಉದ್ಘಾಟಿಸಿದರು .ನಂತರ ಪ್ರಣಾಳಿಕೆಯಲ್ಲಿ ಹೋರಡಿಸಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನೀಡಲಾಗುವುದು ಎಂದು ಹೇಳಿ 2000ರೂ ಚೆಕ್ ನ ಪ್ರತಿಯನ್ನು ಬಹಿರಂಗ ಪಡಿಸಿದರು. ಇವರನ್ನು ನೋಡಲೆಂದೇ ರಾಜ್ಯದ ಹಲವಾರು ಜನ ಸೇರಿದ್ದರು ಹಾಗೂ ಪ್ರಿಯಾಂಕಾ ಗಾಂಧಿ ಅವರ ಭಾಷಣ ಕೇಳಿದ ಮಹಿಳಾ ಮಣಿಯರು ಚಪ್ಪಾಳೆಯ ಸುರಿಮಳೆ ಸುರಿಸಿದರು.
ಇನ್ನು ಕಾರ್ಯಕ್ರಮ ಮುಗಿದು ನಂತರ ಎಲ್ಲಾ‌ ಮಹಿಳೆಯರು ಸೀರೆ ಹಂಚಲಾಯಿತು. ಊಟ ಮಾಡಿ ಬಸ್ಸಿನಲ್ಲಿ ಅವರವರ ಊರುಗಳಿಗೆ ತೆರಳಿದರು.
ಬಿಜೆಪಿ ಆರೋಪ
ನಂತರ ಸಭೆ ಮುಗಿದ ಬಳಿಕ ಸಮಾವೇಶಕ್ಕೆ ಆಗಮಿಸಿದ ಜನರಿಗೆ ಪ್ರತಿಯೊಬ್ಬರಿಗೂ 2000 ಕೊಟ್ಟು ಕರೆಸಿದ್ದಾರೆ . ಇದೇ ಇರಬೇಕು ಗೃಹಲಕ್ಷ್ಮಿ ಯೋಜನೆ . ಅಲ್ಲೇ ಡ್ರಾ ಅಲ್ಲೇ ಬಹುಮಾನ ಬಂದಿರುವವರಿಗೆ ಒಳ್ಳೆಯ ಲಾಭ ಎಂದು ಆರೋಪ‌ ಮಾಡುವ ಮೂಲಕ ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ

ಚಳಿಗಾಲದಲ್ಲಿ ತುಲಸಿ ಎಲೆಯ ಪ್ರಯೋಜನಗಳು..!

‘ನಾ ನಾಯಕಿ’ ಎಂದು ಸ್ವಯಂ ಘೋಷಿಸಿಕೊಳ್ಳುವ ಸ್ಥಿತಿ ಪ್ರಿಯಾಂಕಾ ಗಾಂಧಿಗೆ ಬಂದಿದೆ : ಸಿಎಂ ಬೊಮ್ಮಾಯಿ ವ್ಯಂಗ್ಯ

ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಿಯಾಂಕಾ ಗಾಂಧಿ : ರಾಜ್ಯ ಮಹಿಳಾ ಕಾಂಗ್ರೆಸ್ ಭರ್ಜರಿ ತಯಾರಿ

- Advertisement -

Latest Posts

Don't Miss