Saturday, July 27, 2024

Latest Posts

ಇಂಥ ಸ್ಥಿತಿಯಲ್ಲಿ ಯಾವಾಗಲೂ ಮೌನ ವಹಿಸಿ..

- Advertisement -

ಮಾತು ಅನ್ನೋದು ತೀಕ್ಷ್ಣವಾದ ಬಾಣ ಇದ್ದಂತೆ. ಅದನ್ನ ಸಮಯ ಬಂದಾಗ ಮಾತ್ರ ಉಪಯೋಗಿಸಬೇಕೆ ಹೊರತು, ಕಂಡ ಕಂಡಲ್ಲಲ್ಲ. ಅಂದ್ರೆ ಮಾತನಾಡಬೇಕಾದ ಸಂದರ್ಭ ಬಂದಾಗಷ್ಟೇ ಮಾತನಾಡಬೇಕು ವಿನಃ ಮನಸ್ಸು ಬಂದಾಗಲ್ಲ. ಯಾಕಂದ್ರೆ ಕೆಲವೊಮ್ಮೆ ನಮ್ಮ ಮಾತು ನಮ್ಮನ್ನ ಕಷ್ಟಕ್ಕೆ ಸಿಲುಕಿಸಿದರೆ, ಮೌನ ಲಕ್ ಚೇಂಜ್ ಮಾಡಬಹುದು. ಹಾಗಾಗಿ ಕೆಲ ಸ್ಥಿತಿಯಲ್ಲಿ ಮೌನ ವಹಿಸುವುದೇ ಲೇಸು. ಹಾಗಾದ್ರೆ ಯಾವಾಗ ನಾವು ಮೌನ ವಹಿಸಬೇಕು ಅಂತಾ ತಿಳಿಯೋಣ ಬನ್ನಿ..

ಒಂದೂರಲ್ಲಿ ಓರ್ವ ರಾಜ ಮತ್ತೋರ್ವ ಮಂತ್ರಿ ಇದ್ದ. ಮಂತ್ರಿಯ ಮನೆಯಲ್ಲಿ ನೂರು ಜನ ವಾಸಿಸುತ್ತಿದ್ದರು. ಅವರದ್ದು ಕೂಡು ಕುಟುಂಬವಾಗಿತ್ತು. ಅಣ್ಣ ತಮ್ಮಂದಿರೆಲ್ಲ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಅವರೆಲ್ಲ ಅನ್ಯೋನ್ಯತೆಯಿಂದ ಇದ್ದರು. ಅವರ ಅನ್ಯೋನ್ಯತೆಯ ಸುದ್ದಿ ಇಡೀ ರಾಜ್ಯದಲ್ಲೇ ಮನೆ ಮಾತಾಗಿತ್ತು. ಒಮ್ಮೆ ರಾಜನಿಗೂ ತನ್ನ ಮಂತ್ರಿಯ ಮನೆಯ ಸುದ್ದಿ ಬಂತು. ಅವನು ಮಂತ್ರಿಯ ಮನೆಗೆ ಹೋಗಬೇಕು. ಆ ಕೂಡು ಕುಟುಂಬವನ್ನು ನಾನೂ ನೋಡಬೇಕು ಎಂದು ಅಂದುಕೊಂಡ.

ನಮ್ಮನ್ನು ನಾವು ಇನ್ನೊಬರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು.. ಯಾಕೆ ಗೊತ್ತಾ..?

ರಾಜ ಮಂತ್ರಿಯ ಮನೆಗೆ ಹೋದ. ಅವನಿಗೆ ಸಕಲ ಸತ್ಕಾರವನ್ನು ಮಾಡಿ. ಭಕ್ಷ್ಯ ಭೋಜನಗಳನ್ನು ನೀಡಿ ಗೌರವಿಸಲಾಯಿತು. ಸತ್ಕಾರವೆಲ್ಲ ಮುಗಿದ ಬಳಿಕ, ರಾಜ ಮತ್ತು ಮಂತ್ರಿ ಹರಟೆಗೆ ಕುಳಿತರು. ಆಗ ರಾಜ, ಹಲವರ ಮನೆಯಲ್ಲಿ 10 ಜನರಿದ್ದರೇನೆ, ಪ್ರತಿದಿನ ಜಗಳವಾಗುತ್ತಿರುತ್ತದೆ. ಅಂಥಹುದರಲ್ಲಿ ನಿಮ್ಮ ಮನೆಯಲ್ಲಿ ನೂರು ಜನರಿದ್ದೀರಿ. ಅದರಲ್ಲೂ ಇಷ್ಟು ಪ್ರೀತಿ, ಅನ್ಯೋನ್ಯದಿಂದಿದ್ದೀರಿ. ಇದರ ಹಿಂದಿನ ರಹಸ್ಯವೇನು ಎಂದು ಕೇಳುತ್ತಾನೆ.

ಅದಕ್ಕೆ ಮಂತ್ರಿ, ನಮಮ್ಮ ಮನೆಯ ಪ್ರೀತಿ, ಮಮಕಾರ, ಅನ್ಯೋನ್ಯತೆಯ ರಹಸ್ಯ ತಾಳ್ಮೆ ಮತ್ತು ಮೌನ. ಮನುಷ್ಯ ಅಂದ ಮೇಲೆ ಅವನಿಗೆ ಖುಷಿ, ಕೋಪ ಎರಡೂ ಆಗುತ್ತದೆ. ಖುಷಿಯಾದಾಗ, ಎಲ್ಲರೂ ಅದನ್ನು ಹಂಚಿಕೊಳ್ಳುತ್ತೇವೆ. ಆದರೆ ಒಬ್ಬರಿಗೆ ಕೋಪ ಬಂದಾಗ, ಎಲ್ಲರೂ ಮೌನದಿಂದಿರುತ್ತೇವೆ. ತಾಳ್ಮೆಯಿಂದ ವರ್ತಿಸುತ್ತೇವೆ. ಆಗ ಕೋಪ ಬಂದವರು ಸ್ವಲ್ಪ ಹೊತ್ತಿಗೆ, ಸುಮ್ಮನಾಗುತ್ತಾರೆ. ಮತ್ತೆ ಎಲ್ಲರೂ ಒಂದಾಗುತ್ತೇವೆ. ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ ಎನ್ನುತ್ತಾನೆ.

ಈ ವಿಷಯವನ್ನ ಗಮನದಲ್ಲಿಟ್ಟುಕೊಂಡರೆ ನೀವು ಲೀಡರ್ ಆಗುವುದನ್ನ ಯಾರೂ ತಡೆಯಲಾಗುವುದಿಲ್ಲ..

ಈ ಕಥೆಯ ಸಾರವೇನೆಂದರೆ, ಒಬ್ಬರು ಕೋಪದಿಂದ ಕಿರುಚಾಡುವಾಗ, ಇನ್ನೊಬ್ಬರು ತಾಳ್ಮೆಯಿಂದಿರಬೇಕು. ಇಬ್ಬರೂ ಕಿರುಚಾಡಿದ್ದಲ್ಲಿ, ಅಲ್ಲಿ ಕೋಪ, ದ್ವೇಷ ಇನ್ನೂ ಹೆಚ್ಚುತ್ತದೆ. ಎಲ್ಲರಿಗೂ ತಮ್ಮ ಮಾತನ್ನು ಇನ್ನೊಬ್ಬರು ಕೇಳಬೇಕು ಅಂತಾ ಇರುತ್ತದೆ. ಆದ್ರೆ ಅದನ್ನು ತಾಳ್ಮೆಯಿಂದ, ಸಮಾಧಾನದಿಂದ ಕುಳಿತು ಹೇಳಬೇಕೆ ವಿನಃ ಕೋಪ ಮಾಡಿದ್ದಲ್ಲಿ, ಇನ್ನೊಬ್ಬರ ತಾಳ್ಮೆ ಗೆಡುತ್ತದೆ. ಹಾಗಾಗಿ ಒಬ್ಬರು ತಾಳ್ಮೆಗೆಟ್ಟಾಗ, ಇನ್ನೊಬ್ಬರು ಮೌನವಾಗಿ ತಾಳ್ಮೆಯಿಂದ ಇದ್ದರೆ, ಒಳ್ಳೆಯದು.

- Advertisement -

Latest Posts

Don't Miss