Friday, July 4, 2025

Latest Posts

ಶೋಭಿತಾ ಜೊತೆ ನಿಶ್ಚಿತಾರ್ಥ, ನಾಗಚೈತನ್ಯಗೆ ಶಾಕ್!

- Advertisement -

ಇತ್ತೀಚೆಗಷ್ಟೆ ಟಾಲಿವುಡ್​ನ ಸ್ಟಾರ್​ ನಟ ನಾಗಚೈತನ್ಯ, ಶೋಭಿತಾ ಧೂಳಿಪಾಲ ಅವರನ್ನ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸದ್ಯ ಇವರಿಬ್ಬರೂ ಸಂಭ್ರಮದ ಮೂಡ್​​​ನಲ್ಲಿರುವಾಗ ನಾಗಚೈತನ್ಯಗೆ ಒಂದು ಸಂಕಷ್ಟ ಎದುರಾಗಿದೆ. ಈ ಸಮಯದಲ್ಲಿ ನಾಗಚೈತನ್ಯಗೆ ಎದುರಾಗಿರುವ ಸಂಕಷ್ಟವಾದರೂ ಏನು ಅಂತೀರಾ..!

ಇನ್ನು ನಟ ನಾಗಚೈತನ್ಯ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಟಿ ಹಾಗೂ ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013ರ ವಿನ್ನರ್ ಆದಂತಹ ಶೋಭಿತಾ ಧೂಳಿಪಾಲ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸದ್ಯ
ಈ ಜೋಡಿ ನಿಶ್ಚಿತಾರ್ಥದ ಸುದ್ದಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ, ತಮ್ಮ ಮಾಜಿ ಪತ್ನಿ ಸಮಂತಾ ಅವರೊಟ್ಟಿಗಿನ ಹಳೆಯ ಫೋಟೋಗಳನ್ನ ಡಿಲೀಟ್​ ಮಾಡಲು ತಿಳಿಸಿದೆ.

ಮೇಡ್ ಇನ್ ಹೆವೆನ್ ಸೀರೀಸ್​ನ ನಟಿಯೊಂದಿಗೆ ತನ್ನ ನಿಶ್ಚಿತಾರ್ಥವನ್ನು ಘೋಷಿಸಿದ ನಾಗಚೈತನ್ಯ ತಮ್ಮ ಇನ್​ಸ್ಟಾಗ್ರಾಮ್​​ ಹ್ಯಾಂಡಲ್​ನಿಂದ ಸಮಂತಾ ಅವರೊಟ್ಟಿಗಿನ ಎಲ್ಲಾ ಫೋಟೋಗಳನ್ನ ಡಿಲೀಟ್​ ಮಾಡಿದ್ದಾರೆ.
ಆದರೂ ಕೂಡ, ನಾಗ ಚೈತನ್ಯ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಸಮಂತಾ ಅವರ 2018ರಲ್ಲಿ ತೆಗೆದ ಫೋಟೋವೊಂದಿದೆ. ಈ ಫೋಟೋದಲ್ಲಿ ಚೈ ಹಾಗೂ ಸ್ಯಾಮ್​ ರೇಸ್ ಕಾರ್‌ನ ಪಕ್ಕದಲ್ಲಿ ಪೋಸ್ ನೀಡಿದ್ದು, ಥ್ರೋಬ್ಯಾಕ್…ವೈಫ್​ ಆ್ಯಂಡ್​ ದಿ ಗರ್ಲ್​ ಫ್ರೆಂಡ್​ ಅಂತ ಬರೆದಿದ್ದಾರೆ. ಅವರು ಒಟ್ಟಿಗೆ ಇರುವ ಮತ್ತೊಂದು ಫೋಟೋ ಮಜಿಲಿ ಚಿತ್ರದ ಪೋಸ್ಟರ್. ಇನ್ನುಈ ಸಿನಿಮಾದಲ್ಲಿಇಬ್ಬರು ನಟಿಸಿದ್ದು, ಸಿನಿಮಾ ಸೂಪರ್​ ಡೂಪರ್​ ಆಗಿತ್ತು.

ಇದೀಗ ಈ ಪೋಸ್ಟ್​ ಎಲ್ಲೆಡೆ ವೈರಲ್​ ಆಗ್ತಿದ್ದು, ನೆಟ್ಟಿಗರು ಕೂಡಲೇ ಈ ಪೋಸ್ಟ್​ ಅನ್ನ ಡಿಲೀಟ್​ ಮಾಡಿ ಎನ್ನುತ್ತಿದ್ದಾರೆ. ಇನ್ನು ಕೆಲವರು, ನಿಮ್ಮ ಇನ್​ಸ್ಟಾಗ್ರಾಮ್ ಫೀಡ್​ನಲ್ಲಿ ಈ ಫೋಟೋ ಇರುವುದು ತಪ್ಪಲ್ಲ ಆದ್ರೆ ನೀವು ನೀಡಿರುವ ಕ್ಯಾಪ್ಷನ್​? ಗಾಂಭೀರವಾಗಿ, ಚೈ ಪ್ಲೀಸ್ ಆ ಪೋಸ್ಟ್​ ಅನ್ನ ಡಿಲೀಟ್​ ಮಾಡಿ, ನೀವು ಬೇರೆ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೀರಿ.. ಹೀಗೆ ನಾನಾ ಬಗೆಯ ಕಮೆಂಟ್​ಗಳ ಸುರಿ ಮಳೆಯೇ ಸುರಿದಿದೆ.

*ಸ್ವಾತಿ.ಎಸ್​.

- Advertisement -

Latest Posts

Don't Miss