Gadag News: ಗದಗ ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಮಹಿಳೆಯರು, ಮಕ್ಕಳು ನಾಗರ ದೇವನಿಗೆ ಹಾಲನ್ನ ಎರೆದು ನಾಗರ ಪಂಚಮಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಶೆಂಗಾ ಉಂಡಿ, ಎಳ್ಳು ಉಂಡಿ, ಡಾಣಿ ಉಂಡಿ, ರವೆ ಉಂಡಿ, ಕರದಂಟು, ಅಳ್ಳಿಟ್ಟು ಹೀಗೆ ಉಂಡಿಗಳ ಜೊತೆಗೆ ಕಡಲೆ ಉಸುಳಿ ಸೇರಿದಂತೆ ಅನೇಕ ಪದಾರ್ಥಗಳನು ನೀವೇದ್ಯ ಮಾಡಿ ಭಕ್ತಿ ಶ್ರದ್ಧೆಯಿಂದ ನಾಗರ ಪಂಚಮಿ ಆಚರಿಸಿದ್ರು.
ಬಿಸಿಲು ಬೀಳದಂಗೆ ಬೆಳೆಸಿದ ಜೋಳ, ಮುಸುಕಿನ ಜೋಳದ ಸಸಿಗಳು ಜೊತೆಗೆ ಹೂವುಗಳ ಅಲಂಕಾರದೊಂದಿಗೆ ನಾಗ ದೇವನಿಗೆ ಗೌರವಿಸಿದರು. ನಂತರ ಸಧಭಕ್ತರು ಸೇರಿ ನಾಗದೇವನಿಗೆ ಅರ್ಪಿಸಿದ ಹೂವುಗಳ್ಳುನು ಮುಡಿದು ಕೊಂಡು ನೇವಿದ್ಯವನ್ನು ಸ್ವೀಕರಿಸಿ, ಸಂತೃಪ್ತಿಯೊಂದಿಗೆ ಜೋಕಾಲಿ ಆಡಿ ಸಂಭ್ರಮಿಸಿದ್ರು.
ಮದುವೆಯಾಗಿ ಗಂಡನ ಮನೆಗೆ ತೆರಳಿದ್ದ ಮಹಿಳೆಯರನ್ನ ಪಂಚಮಿ ಹಬ್ಬಕ್ಕೆ ತವರು ಮನೆಗೆ ಕರೆಸಿ ಕುಟುಂಬದೊಂದಿಗೆ ಹಬ್ಬ ಆಚರಣೆ ಮಾಡಿದ್ರು. ದೂರದೂರಲ್ಲಿ ನೆಲೆಸಿದ್ದ ಗೆಳತಿಯರೆಲ್ಲರೂ ಒಂದೆಡೆ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ರು.