PSI ನೇಮಕಾತಿ ಅಕ್ರಮ: ಸಚಿವ ಅಶ್ವತ್ಥನಾರಾಯಣ ಸಂಬಂಧಿ ಎನ್ನಲಾದ ನಾಗೇಶ್ ಗೌಡ ಬಂಧನ

ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ, ಇಂದು ಬೆಳಿಗ್ಗೆ ಇಬ್ಬರು ಅಭ್ಯರ್ಥಿಗಳನ್ನು ಸಿಐಡಿ ಬಂಧಿಸಿತ್ತು. ಇದೀಗ ಪ್ರತಿಪಕ್ಷಗಳ ನಾಯಕರು ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರ ಸಂಬಂಧಿ ಎಂಬುದಾಗಿ ಆರೋಪಿಸಲಾಗುತ್ತಿದ್ದಂತ ಅಭ್ಯರ್ಥಿ ನಾಗೇಶ್ ಗೌಡ ಎಂಬಾತನನ್ನು ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಹಾಗೇ ನಾಗೇಶ್ ಗೌಡ, ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಬೆಳಕಿಗೆ ಬರುತ್ತಿದ್ದಂತ ತಲೆ ಮರೆಸಿಕೊಂಡಿದ್ದರು. ಈತ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಸಂಬಂಧಿ ಕೂಡ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಈತ ಆನಂದ್ ಮೇತ್ರೆ ಹಾಗೂ ಕಿಂಗ್ ಪಿನ್ ಆರ್ ಡಿ ಪಾಟೀಲ್ ಆಪ್ತ ಕೂಡ ಎಂದೇ ಹೇಳಲಾಗುತ್ತಿತ್ತು. ಇದೀಗ ಈ ಆರೋಪಿಯನ್ನು ಕೊನೆಗೂ ಸಿಐಡಿ ಬಂಧಿಸಲು ಯಶಸ್ವಿಯಾಗಿದೆ.

About The Author