Nagaur News: ಶಾಲೆಯಲ್ಲಿ ಆಡುವಾಗ ಹೃದಯಾಘಾತದಿಂದ ಸಾ*ವನ್ನಪ್ಪಿದ 5ನೇ ತರಬೇತಿ ಬಾಲಕಿ

Nagaur News: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳು, ಯುವಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅಂಥದ್ದೇ ಘಟನೆ ರಾಜಸ್ತಾನದ ನಾಗೌರ್ ಎಂಬಲ್ಲಿ ನಡೆದಿದ್ದು, 5ನೇ ತರಗತಿ ಓದುತ್ತಿದ್ದ 9 ವರ್ಷದ ಬಾಲಕಿ, ಶಾಲೆಯಲ್ಲಿ ಆಡುತ್ತಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ದಿವ್ಯಾ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ ಬಾಲಕಿಯಾಗಿದ್ದು, ಆಕೆ ಕುಸಿದು ಬಿದ್ದ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೆಬ್ರವರಿ 23ರಂದು ಈ ಘಟನೆ ನಡೆದಿದ್ದು, ಬೆಳಗ್ಗಿನ ಶಾಲಾ ಪ್ರಾರ್ಥನೆಗೆ ಕೆಲ ಸಮಯ ಬಾಕಿ ಇರುವಾಗಲೇ, ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು. ಈ ಸಮಯದಲ್ಲಿ ದಿವ್ಯಾ ಕುಸಿದು ಬಿದ್ದಿದ್ದಾಳೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾದರೂ, ಆಕೆ ಮುಂಚೆಯೇ ಸಾವನ್ನಪ್ಪಿದ್ದಳು ಎಂದು ವೈದ್ಯರು ಧೃಡಪಡಿಸಿದ್ದಾರೆ. ಆಕೆಯ ಪೋಷಕರ ಒಪ್ಪಿಗೆಯ ಜತೆ ಮರಣೋತ್ತರ ಪರೀಕ್ಷೆ ಮಾಡದೇ, ಆಕೆಯ ಅಂತ್ಯಸಂಸ್ಕಾರ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಆಕೆಯ ಅಣ್ಣ ಕೂಡ ಇದೇ ರೀತಿ ಕುಸಿದು ಬಿದ್ದು ಸಾವನ್ನಪ್ಪಿದ್ದ. ಇದೀಗ ತಂಗಿಯೂ ಅದೇ ರೀತಿ ವರ್ಷದ“ಳಗೇ ಸಾವನ್ನಪ್ಪಿರುವುದು ಆಕೆಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

About The Author