Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ರೈತ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದ್ದು, ಈ ನಿಟ್ಟಿನಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದಲ್ಲಿ ಮೆಣಸಿನಕಾಯಿ, ಹೆಸರು ಸಂಪೂರ್ಣ ಹಾಳಾಗಿದ್ದು, ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್.ಎಚ್.ಕೋನರೆಡ್ಡಿ ವೀಕ್ಷಣೆ ಮಾಡಿ ರೈತರ ಅಳಲನ್ನು ಆಲಿಸಿದರು.
ಹೆಸರಿನ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಮೆಣಸಿನಕಾಯಿ ರೋಗದ ಬಾಧೆಯಿಂದ ಕೈಗೆ ಬರದಂತ ಸ್ಥಿತಿ ತಲುಪಿದ್ದು, ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಭೂಮಿಯ ಬೆಳೆ ಹಾಳಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ನೇತೃತ್ವದಲ್ಲಿ ಹೆಸರು ಬೆಳೆ, ಮೆಣಸಿನಕಾಯಿ ಬೆಳೆಯ ವೀಕ್ಷಣೆ ಮಾಡಿದರು.
ಇನ್ನೂ ಹೆಸರು ಬೆಳೆಯ ಒಕ್ಕಲು ಮಾಡುವ ಸ್ಥಳಕ್ಕೆ ಭೇಟಿ ನೀಡಿ, ಹೆಸರು ಬೆಳೆಯ ಗುಣಮಟ್ಟ ಹಾಗೂ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಸಚಿವರು ರೈತರಿಂದಲೇ ಮಾಹಿತಿ ಪಡೆದಿದ್ದು, ಈ ಬಗ್ಗೆ ಸಿಎಂ ಸಿದ್ಧರಾಮಯ್ಯನವರ ಜೊತೆಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.