ಆಧುನಿಕ ತಂತ್ರಜ್ಞಾನ ಹೆಚ್ಚಾಗ್ತಿದ್ದಂತೆ ಸಿನಿಮಾಗಳನ್ನ ವೀಕ್ಷಿಸೋದು ಬಹಳ ಸುಲಭವಾಗಿದೆ.. ಕುಳಿತ ಜಾಗದಲ್ಲೇ ನಮಗೆ ಬೇಕಾದ ಭಾಷೆಗಳಲ್ಲಿ ಬೇಕಾದ ಸಿನಿಮಾಗಳನ್ನ ನೋಡಲುಸಾಧ್ಯವಾಗುವಷ್ಟರ ಮಟ್ಟಿಗೆ ಟೆಕ್ನಾಲಜಿ ಮುಂದುವರೆದಿದೆ.. ಚಲನಚಿತ್ರಗಳನ್ನ ವೀಕ್ಷಿಸಲೆಂದೇ ಅಮೆಜಾನ್ ಪ್ರೈಮ್ , ನೆಟ್ ಫ್ಲಿಕ್ಸ್ ಗಳಂತಹ ಆಪ್ ಗಳು ಇವೆ.. ಇವುಗಳ ಮೂಲಕ ಯಾವುದೇ ಭಾಷೆಯ ಇತ್ತೀಚೆಗೆ ತೆರೆಕಂಡ ಸಿನಿಮಾಗಳನ್ನೂ ನಾವು ವೀಕ್ಷಿಸಬಹುದು.. ಕನ್ನಡ ಸಿನಿಮಾಗಳೂ ಕೂಡ ಆ ಆಪ್ ಗಳಲ್ಲಿ ಸಿಗುತ್ವೆ.. ಆದ್ರೆ ಇದುವರೆಗೂ ಕೇವಲ ಕನ್ನಡ ಸಿನಿಮಾಗಳಿಗಾಗಿಯೇ ಎಂದು ಯಾವುದೇ ಆಪ್ ಬಂದಿಲ್ಲ.. ಇದೇ ಮೊದಲ ಬಾರಿಗೆ ನಮ್ಮ ಕನ್ನಡದವರೇ ಆದ ವಿಜಯ್ ಪ್ರಕಾಶ್ ಅನ್ನುವವರು ಕನ್ನಡ ಸಿನಿಮಾಗಳಿಗಾಗಿಯೇ ನಮ್ಮ ಫ್ಲಿಕ್ಸ್ ಅನ್ನುವ ಹೊಸದೊಂದು ಆಪ್ ಕ್ರಿಯೇಟ್ ಮಾಡಿದ್ದಾರೆ..
ಟೆಕ್ನಿಕಲ್ ಫೀಲ್ಡ್ ನಲ್ಲೇ ಸುಮಾರು 15 ವರ್ಷಗಳ ಅನುಭವವಿರುವ ವಿಜಯ್ ಅವರು ಇಂತಹದ್ದೊಂದು ಆಪ್ ಕ್ರಿಯೇಟ್ ಮಾಡಿದ್ದಾರೆ.. 2009ರಲ್ಲಿ ಗೇಮ್ ಕಂಪನಿಯನ್ನ ಶುರು ಮಾಡಿದ ವಿಜಯ್ ಅವರು ಕಳೆದ ವರ್ಷ ಕನ್ನಡಕ್ಕಾಗಿಯೇ ಪ್ರತ್ಯೇಕ ಓಟಿಟಿ ಫ್ಲಾಟ್ ಫಾರ್ಮ್ ಇರಲಿ ಅನ್ನುವ ಉದ್ದೇಶದಿಂದ ಈ ಆಪ್ ಮಾಡಿದ್ದಾರೆ.. ಕನ್ನಡ ಭಾಷೆ ಹಾಗೂ ಕನ್ನಡಿಗರ ಮೇಲಿನ ಅಭಿಮಾನದಿಂದಾಗಿ ಈ ಆಪ್ ಗೆ ನಮ್ಮ ಫ್ಲಿಕ್ಸ್ ಅನ್ನುವ ಹೆಸರನ್ನಿಟ್ಟಿದ್ದಾರಂತೆ.. ವಿಜಯ್ ಅವರು ಟೆಕ್ನಿಕಲ್ ಬ್ಯಾಕ್ ಗ್ರೌಂಡ್ ನವರಾದ್ರೂ ಸಿನಿಮಾ ನಿರ್ದೇಶನದ ಬಗ್ಗೆಯೂ ಸಾಕಷ್ಟು ಆಸಕ್ತಿ ಇರುವವರು.. ಹಿರಿಯ ನಿರ್ದೇಶಕರಾದ ಭಗವಾನ್ ಹಾಗೂ ತಿಪಟೂರು ರಘು ಅವರು ನಡೆಸುತ್ತಿದ್ದ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನದ ಬಗ್ಗೆಕೋರ್ಸ್ ಕೂಡ ಮಾಡಿದ್ದಾರೆ.. ವಿಶೇಷ ಅಂದ್ರೆ ಇದೀಗ ತಿಪಟೂರು ರಘು ಅವರ ಪುತ್ರ ನವೀನ್ ರಘು ನಾಯಕರಾಗಿ ನಟಿಸಿರುವ ಭ್ರಮೆ ಚಿತ್ರವನ್ನ ಇದೇ ನಮ್ಮ ಫ್ಲಿಕ್ಸ್ ಆಪ್ ಮೂಲಕ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ..
ಕೊರೋನಾ ಬಂದ್ಮೇಲೆ ಚಿತ್ರಮಂದಿರಗಳು ಓಪನ್ ಆಗಿಲ್ಲದ ಕಾರಣ, ಸಾಕಷ್ಟು ಸಿನಿಮಾಗಳು ಓಟಿಟಿ ಫ್ಲಾಟ್ ಫಾರ್ಮ್ ಕಡೆಗೆ ಗಮನಹರಿಸ್ತಿವೆ.. ಹಾಗಾಗಿ ಭ್ರಮೆ ಚಿತ್ರತಂಡವೂ ತಮ್ಮ ಚಿತ್ರವನ್ನ ಕನ್ನಡದ ಓಟಿಟಿ ನಮ್ಮ ಫ್ಲಿಕ್ಸ್ ನಲ್ಲೇ ರಿಲೀಸ್ ಮಾಡಲು ಸಜ್ಜಾಗಿದೆ.. ಮತ್ತೊಂದು ವಿಶೇಷ ಅಂದ್ರೆ ಅಮೆಜಾನ್ ಪ್ರೈಮ್ ಹಾಗೂ ನೆಟ್ ಫ್ಲಿಕ್ಸ್ ನಲ್ಲಿರುವಂತೆ ಸಿನಿಮಾಗಳ ಜೊತೆಗೆ ವೆಬ್ ಸೀರಿಸ್ ಕೂಡ ನಮ್ಮ ಫ್ಲಿಕ್ಸ್ ನಲ್ಲೂ ಮೂಡಿಬರಲಿದ್ಯಂತೆ.. ಒಟ್ಟಾರೆ ಹೀಗೆ ಕನ್ನಡಕ್ಕಾಗಿಯೇ ಪ್ರತ್ಯೇಕ ಓಟಿಟಿ ಫ್ಲಾಟ್ ಫಾರ್ಮ್ ಬರ್ತಿರೋದು ನಿಜಕ್ಕೂ ಕನ್ನಡಿಗರ ಪಾಲಿಗೆ ಖುಷಿಯ ಸಂಗತಿ..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ