- Advertisement -
ಶಿವಸೇನೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ಜಟಾಪಟಿ ಮುಗಿಯೋವಂತೆ ಕಾಣ್ತಿಲ್ಲ. ನಿನ್ನೆಯಷ್ಟೇ ಕಂಗನಾ ವಿರುದ್ಧ ಶಿವಸೇನೆ ನಾಯಕರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೆ ಕಂಗನಾ ಟ್ವಿಟರ್ನಲ್ಲಿ ಶಿವಸೇನೆಯ ಬೆವರಿಳಿಸಿದ್ದಾರೆ.
ಭದ್ರತೆಯ ಜೊತೆ ಮುಂಬೈನಲ್ಲಿ ವಾಸವಿದ್ದ ನಟಿ ಕಂಗನಾ ಇದೀಗ ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಪದೇ ಪದೇ ಭಾವನಾತ್ಮಕವಾಗಿ ನನ್ನ ಮೇಲೆ ದಾಳಿ ಮಾಡಲಾಗಿದೆ. ಹಾಗೂ ಕ್ಷುಲ್ಲಕ ಕಾರಣ ನೀಡಿ ನನ್ನ ಕಚೇರಿಯನ್ನ ಧ್ಚಂಸ ಮಾಡಿದ್ದಾರೆ. ನನ್ನ ಸುತ್ತ ಆಯುಧ ಹಿಡಿದುಕೊಂಡು ಜನರು ನನಗೆ ರಕ್ಷಣೆ ನೀಡುವಂತಾಗಿದೆ, ಇದನ್ನೆಲ್ಲ ನೋಡ್ತಿದ್ರೆ ಮುಂಬೈಯನ್ನ ಪಿಒಕೆ ಎಂದ ನನ್ನ ಹೇಳಿಕೆ ಎಷ್ಟು ಸತ್ಯ ಅಂತಾ ನನಗನಿಸುತ್ತೆ. ಭಾರವಾದ ಹೃದಯದಿಂದ ನಾನು ಮುಂಬೈನಿಂದ ವಾಪಸ್ಸಾಗುತ್ತಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.
- Advertisement -