Friday, June 20, 2025

Latest Posts

ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಅಂತಿಮ..!

- Advertisement -

www.karnatakatv.net: ನಮ್ಮ ಮೆಟ್ರೋದ 3ನೇ ಹಂತದ ಯೋಜನೆಯನ್ನು ಅಂತಿಮಗೊಳಿಸಲಾಗಿದೆ.

42 ಕಿ.ಮೀ ಉದ್ದದ ಯೋಜನೆ ಇದಾಗಿದ್ದು, ಈ ಯೋಜನೆಯಲ್ಲಿ ಉಪನಗರ ರೈಲು, ಬಸ್ ಡಿಪೋಗಳು ಸೇರಿದಂತೆ 9 ಕಡೆಗಳಲ್ಲಿ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಯು 2027-28ಕ್ಕೆ ಕಾರ್ಯಾರಂಭಗೊಳ್ಳಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಸಿದ್ಧಪಡಿಸಿರುವ ವರದಿ ಪ್ರಕಾರ, ಹಂತ-3 ಎರಡು ಮೆಟ್ರೋ ಕಾರಿಡಾರ್‌ಗಳನ್ನು ಹೊಂದಿರುತ್ತದೆ. ಕಾರಿಡಾರ್ 1 ಹೊರ ವರ್ತುಲ ರಸ್ತೆಯಲ್ಲಿ ಜೆಪಿನಗರದಿಂದ ಹೆಬ್ಬಾಳದವರೆಗೆ 31 ಕಿ.ಮೀ ಸಾಗಲಿದೆ. ಹಾಗೇಯೇ ಕಾರಿಡಾರ್ 2 ಹೊಸಹಳ್ಳಿ ಟೋಲ್ ನಿಂದ ಕಡಬಗೆರೆವರೆಗೆ 11 ಕಿ.ಮೀ ಸಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.

ಕಳೆದ ಆಗಸ್ಟ್ 29ರಂದು ನಾಯಂಡನಹಳ್ಳಿಯಿoದ ಕೆಂಗೇರಿವರೆಗಿನ ಮೆಟ್ರೋ ರೈಲು ಸಂಚಾರ ಉದ್ಘಾಟನೆ ಮಾಡುವ ಮೂಲಕ ಈ ಮಾರ್ಗದಲ್ಲಿ ಓಡಾಡುವ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ ಒಟ್ಟು 7.5 ಕಿ.ಮಿ. ಉದ್ದದ 6 ನಿಲ್ದಾಣಗಳಿರುವ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿಸುವ ಮೂಲಕ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ್ದರು.

- Advertisement -

Latest Posts

Don't Miss