Saturday, July 27, 2024

Latest Posts

Nandi Hills : ಎನ್ ಡಿ ಆರ್ ಎಫ್ ತಂಡದಿಂದ ಯುವಕನ ರಕ್ಷಣೆ ..!

- Advertisement -

ಚಿಕ್ಕಬಳ್ಳಾಪುರ : ಕಳೆದ ವಾರ ಕೇರಳ ಬೆಟ್ಟವೊಂದರಲ್ಲಿ ಸಿಲುಕಿ ಹಾಕಿಕೊಂಡು ಪ್ರಾಣಪಾಯ ಸ್ಥಿತಿಯಲ್ಲಿದ್ದ ಯುವಕನ ರಕ್ಷಣಾ ಕಾರ್ಯಾಚರಣೆ ಹರಸಾಹಸ ಪಟ್ಟು ಎಲಿಕ್ಯಾಪ್ಟರ್ (Elecaptor) ಮೂಲಕ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅಂತಹ ಘಟನೆಯೇ ನಂಧಿಗಿರಿಧಾಮದಲ್ಲಿ (Nandigiridhama) ನಡೆದಿದ್ದು ಆ ಕುರಿತು ವರದಿ ಇಲ್ಲಿದೆ ನೋಡಿ. ಹೀಗೆ ವಿಶುವಲ್ಸ್ ಕಾಣುತ್ತಿರುವ ದೃಶ್ಯಗಳು ಬೇರೆ ಎಲ್ಲೂ ಅಲ್ಲ. ಬೆಂಗಳೂರಿಗೆ ಹತ್ತಿರದಲ್ಲೇ ಇರುವ ನಂಧಿಗಿರಿಧಾಮ ಬೆಟ್ಟಕ್ಕೆ ವೀಕೆಂಡ್ (Weekend) ಮೋಜಿಗಾಗಿ ದೆಹಲಿ ಮೂಲದ ಬೆಂಗಳೂರಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ನಿಶಾಂತ್ ಗುಲ್ಲಾ (Nishant Gullah) (19) ಎಂಬ ಯುವ ಇಂದು ಬೆಳಗ್ಗೆ ಸುಮಾರು ೧೦ ಗಂಟೆ ವೇಳೆ ನಂಧಿಗಿರಿಧಾಮದ ಪಕ್ಕದಲ್ಲೇ ಇರುವ ಬ್ರಹ್ಮಗಿರಿ ಬೆಟ್ಟದಲ್ಲಿ‌ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ನಂತರ ತನ್ನ ಮೊಬೈಲ್ ನಲ್ಲಿ ತಾನು ಬಿದ್ದಿರುವ ಲೊಕೇಷನ್ (Location) ನ್ನು ಪೋಲೀಸ್ ಇಲಾಖೆಯ ಕಂಟ್ರೋಲ್ ರೂಂ (Control Room of the Police Department) ಗೆ ಕಳಿಸಿದ್ದಾನೆ. ನಂತರ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ನಂತರ ಕುಟುಂಬಸ್ಥರು ಸ್ಥಳೀಯ ನಂಧಿಗ್ರಾಮ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೋಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಆತನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಬೆಟ್ಟದಲ್ಲಿ ಆಳ ಹೆಚ್ಚು ಇದ್ದ ಕಾರಣ ಸ್ಥಳೀಯ ಪೋಲೀಸರಿಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ದ್ವಿಚಕ್ರ ವಾಹನದಲ್ಲಿ ಒಬ್ಬನೇ ಬಂದಿದ್ದ ಯುವಕ, ನಂಧಿಗೆ ಬಿಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಬೈಕ್ ನ್ನು ಬೆಟ್ಟದ ತಪ್ಪಲಿನಲ್ಲಿಯೇ ಹಾಕಿ ಟ್ರಕ್ಕಿಂಗ್ (Trucking) ಗೆ ಹೊರಟಿದ್ದಾನೆ. ಈ ವೇಳೆ ಬೆಟ್ಟದ ಅರ್ಧ ಭಾಗಕ್ಕೆ ತೆರಳಿ, ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ನಂತರ ಎಲ್ಲರಿಗೂ ಮಾಹಿತಿ ನೀಡಿದ ಕಾರಣ  ಸ್ಥಳೀಯ ಪೋಲೀಸ್ ಇಲಾಖೆ ಏರ್ಪೋರ್ಸ್ ಗೆ ಮಾಹಿತಿ ನೀಡಿ ಎಲಿಕ್ಯಾಪ್ಟರ್ ಮತ್ತು ಎನ್ ಡಿ ಆರ್ ಎಫ್ (NDRF) , ಅಗ್ನಿಶಾಮಕ ದಳ (Fire department), ಸಿಬ್ಬಂದಿ ಎಲ್ಲರೂ ಆಗಮಿಸಿ ರಕ್ಷಣಾ ಕೆಲಸಕ್ಕೆ ಮುಂದಾಗಿದ್ದಾರೆ. ಸತತ ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ರಕ್ಷಣಾ ತಂಡ ಕೊನೆಗೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಆತನನ್ನು ಎಲಿಕ್ಯಾಪ್ಟರ್ ಮೂಲಕ ಯಲಹಂಕ ಏರ್ಪೋರ್ಸ್ (Yelahanka Airport) ಗೆ ಕಳಿಸಿ ಅಲ್ಲಿಂದ ಸ್ಥಳೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಈ ವೇಳೆಗೆ ಆಗಲೇ ಬೆಟ್ಟದ ಮೇಲಿಂದ ಬಿದ್ದಿದ್ದ ಯುವಕನಿಗೆ ಬೆನ್ನು ಮತ್ತು ದೇಹದ ಕೆಲವೊಂದು ಭಾಗಗಳಿಗೆ ಗಾಯಗಳಾಗಿವೆ. ಒಟ್ಟಾರೆ ನಂಧಿಗಿರಿಧಾಮಕ್ಕೆ ವೀಕೆಂಡ್ ನಲ್ಲಿ ಎಂಜಾಯ್ ಮಾಡಲು ಬರುವ ಪ್ರವಾಸಿಗರ ಹುಚ್ಚಾಟಕ್ಕೆ  ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.  ಗಿರಿಧಾಮಕ್ಕೆ ಬರುವ ಪ್ರವಾಸಿಗರು ಜಾಗರೂಕತೆಯಿಂದ ವರ್ತಿಸಿ ತಮ್ಮ ಪ್ರಾಣದ ಜೊತೆಗೆ ಇತರರ ಪ್ರಾಣವನ್ನೂ ಉಳಿಸಿಬೇಕಿದೆ.

ಅಭಿಷೇಕ್, ಕರ್ನಾಟಕ ಟಿವಿ, ಚಿಕ್ಕಬಳ್ಳಾಪುರ.

- Advertisement -

Latest Posts

Don't Miss