Sunday, September 8, 2024

Latest Posts

‘ನಾನು ಮತ್ತು ಗುಂಡ’ ಖ್ಯಾತಿಯ ಸಿಂಬ ಇನ್ನಿಲ್ಲ.!

- Advertisement -

ಕಾಮಿಡಿ ಕಿಲಾಡಿಗಳ ಸೀಸನ್-1 ನ ವಿಜೇತ ಹಾಸ್ಯ ನಟ ಶಿವರಾಜ್‌ ಕೆಆರ್‌ ಪೇಟೆ ಅವರು ನಾಯಕ ನಟನಾಗಿ ಅಭಿನಯಿಸಿರುವ ‘ನಾನು ಮತ್ತು ಗಂಡ’ ಮೊದಲ ಸಿನಿಮಾ ಅದ್ಭುತವಾಗಿ ಮೂಡಿ ಬಂದಿತ್ತು. ಈ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯನ ಸಂಬಂಧ ಹೇಗಿರುತ್ತೆ ಎಂಬುದನ್ನ ಎಳೆ ಎಳೆಯಾಗಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ನಾಯಿಯ ಹೆಸರೇ ಸಿಂಬ. ಆದರೆ ಇದೀಗ ಸಿಂಬ ನಮ್ಮನೆಲ್ಲ ಅಗಲಿದ್ದಾನೆ.

ಸಿಂಬ, ಮಲಯಾಳಂ ಬ್ಯಾಂಗಲೂರ್ ಡೇಸ್, ಐರಾವತ ಚಿತ್ರದಲ್ಲಿ ಗುಂಡ್ ಉರ್ಫ್‌ ಸಿಂಬಾ ಕಾಣಿಸಿಕೊಂಡಿದ್ದಾನೆ. ಸಿನಿಮಾಗಳಲ್ಲಿ ನಾಯಿ ಬೇಕು ಅಂದ್ರೆ ಮೊದಲು ನಿರ್ದೇಶಕರು ಸಂಪರ್ಕ ಮಾಡುವುದು ಸಿಂಬಾನನ್ನು.

ಗುಂಡ ಹೆಸರಿನ ನಾಯಿಯನ್ನು ಸಂಯುಕ್ತಾ ಹೊರ್ ನಾಡ್ ಸಾಕಿದ್ದರು ಆದರೆ ಇದು ಅವರ ನಾಯಿ ಅಲ್ಲ. ಇದೀಗ ಆ ನಾಯಿ ತೀರಿಕೊಂದಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಥಾ ನಾಯಕ ಶಂಕ್ರ ಮತ್ತು ಆತನ ಸಾಕು ನಾಯಿ ಗುಂಡನ ನಡುವಿನ ಭಾವನಾತ್ಮಕ ಕಥೆ ಇದು. ಪ್ರಾಣಿ ಪ್ರಿಯರಿಗೆ ಹಾಗೂ ನಾಯಿಯ ನಿಯತ್ತು ಗೊತ್ತಿರುವವರಿಗೆ ಈ ಸಿನಿಮಾ ತುಂಬಾ ಇಷ್ಟವಾಗುತ್ತದೆ. ಹಾಸ್ಯದೊಂದಿಗೆ ಶುರುವಾಗುವ ಕಥೆ ಹಲವು ತಿರುವುಗಳ ಮೂಲಕ ನೋಡುಗರನ್ನು ಭಾವುಕಥೆಯತ್ತ ನೂಕುತ್ತದೆ. ಅದು ಈ ಸಿನಿಮಾದ ಬಹು ದೊಡ್ಡ ಶಕ್ತಿಯಾಗಿತ್ತು. ಈ ಸಿನಿಮಾದಲ್ಲಿ ಸಿಂಬ ಪಾತ್ರ ಅತೀ ಮುಖ್ಯ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

- Advertisement -

Latest Posts

Don't Miss