www.karnatakatv.net :ಸೆ.24 ರಂದು ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಜೋ ಬೈಡನ್ ಆಯೋಜಿಸಿದ್ದ ಈ ಸಭೆಯಲ್ಲಿ ಭಾರತದ ಪ್ರಧಾನಿ ಜೋತೆಗೆ ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ , ಜಪಾನ್ ಪ್ರಧಾನಿ ಯೋಶಿ ಹಿಡೆ ಸುಗಾರನ್ನು ಆಹ್ವಾನಿಸಲಾಗಿದೆ. ಮುಕ್ತ ಇಂಡೋ ಪೆಸಿಫಿಕ್ ನ್ನು ಉತ್ತೇಜಿಸುವುದು, ಮತ್ತು ಅನೇಕ ಕ್ಷೇತ್ರಗಲ್ಲಿ ಪ್ರಾಯೋಗಿಕ ಸಹಕಾರವನ್ನು ಮುಂದುವರೆಸುವುದರ ಬಗ್ಗೆ ಚರ್ಚೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಕ್ವಾಡ್ ಶೃಂಗಸಭೆಯ ಮರುದಿನ ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಅವರು ಸಮಕಾಲೀನ ಜಾಗತಿಕ ಸಮಸ್ಯೆಗಳಾದ ವಿಮರ್ಶಾತ್ಮಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸಂಪರ್ಕ ಮತ್ತು ಮೂಲಸೌಕರ್ಯ, ಕಡಲ ಭದ್ರತೆ, ಸೈಬರ್ ಭದ್ರತೆ, ಹವಾಮಾನ ಬದಲಾವಣೆ, ಮಾನವೀಯ ನೆರವು, ವಿಪತ್ತು ಪರಿಹಾರ ಹಾಗೇ ಶಿಕ್ಷಣದ ಬಗ್ಗೆ ಅಭಿಪ್ರಾಯವನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.