ನರೇಂದ್ರ ಮೋದಿ ಒರಿಜಿನಲ್ ಅಲ್ಲ ಡೂಬ್ಲಿಕೇಟ್…!

National News:

ಬಿಹಾರದಲ್ಲಿ ಬಿಜೆಪಿ ಮೈತ್ರಿ ತೊರೆದು ಆರ್‌ಜೆಡಿ ಜೊತೆ ಸೇರಿ ರ‍್ಕಾರ ರಚಿಸಿರುವ ನಿತೀಶ್ ಕುಮಾರ್ ನೇತೃತ್ವಜ ಜೆಡಿಯು ಒಂದರ ಮೇಲೊಂದರಂತೆ ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿತೀಶ್ ಸೇರಿದಂತೆ ಜೆಡಿಯು ಹಾಗೂ ಆರ್‌ಜೆಡಿ ನಾಯಕರು ಆರೋಪ ಮಾಡುತ್ತಲೇ ಇದ್ದಾರೆ. ಇದರ ಮುಂದವರಿದ ಭಾಗವಾಗಿ ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅಸಲಿ ಅಲ್ಲ, ಸಂಪರ‍್ಣ ನಕಲಿ ಎಂದಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ತಾವು ಅತ್ಯಂತ ಹಿಂದುಳಿದ ಜಾತಿಯಿಂದ ಬಂದಿದ್ದೇನೆ ಎಂದು ದೇಶದ ಮುಂದೆ ಸುಳ್ಳು ಹೇಳಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಗುಜರಾತ್‌ನಲ್ಲಿ ಅತ್ಯಂತ ಹಿಂದುಳಿದ ಜಾತಿಯೇ ಇಲ್ಲ. ಹೀಗಾಗಿ ಮೋದಿ ಒರಿಜಿನಲ್ ಅಲ್ಲ, ಡೂಪ್ಲಿಕೇಟ್ ಎಂದು ಲಲನ್ ಸಿಂಗ್ ಹೇಳಿದ್ದಾರೆ.ಇದನ್ನೂ ಓದಿ …ವಿರಾಟ್ ಕೊಹ್ಲಿಗಾಗಿ ಸ್ನೇಹಿತನ ಹತ್ಯೆ ಮಾಡಿದ ಅಭಿಮಾನಿ..!

ಪಾಟ್ನಾದಲ್ಲಿ ಆಯೋಜಿಸಿದ್ದ ಸರ‍್ವಜನಿಕ ಸಮಾರಂಭದಲ್ಲಿ ಮಾತನಾಡಿದ ಲಲನ್ ಸಿಂಗ್ ಪ್ರಧಾನಿ ಮೋದಿ ಎಂದಿಗೂ ಸತ್ಯ ಹೇಳಿಲ್ಲ. ಸುಳ್ಳು ಹೇಳಿ ಅದಕ್ಕೆ ಪೂರಕ ದಾಖಲೆ ಹುಡುಕವ ಹಾಗೂ ಸೃಷ್ಟಿಸುವ ಕೆಲಸ ಮಾಡುತ್ತಾರೆ ಎಂದು ಲಲನ್ ಸಿಂಗ್ ಹೇಳಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಾನು ಅತ್ಯಂತ ಹಿಂದುಳಿದ ಜಾತಿಯಿಂದ ಬಂದಿದ್ದೇನೆ ಎಂದು ಜನರಲ್ಲಿ ಮತ ಕೇಳಿದ್ದಾರೆ. ಗುಜರಾತ್‌ನಲ್ಲಿಇಃಅ ಸಮುದಾಯವೇ ಇಲ್ಲ. ಗುಜರಾತ್‌ನಲ್ಲಿರುವುದು ಒಬಿಸಿ ಮಾತ್ರ ಇಬಿಸಿ ಅಲ್ಲ. ಆದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ತಮ್ಮ ಜಾತಿ ಹಾಗೂ ಸಮುದಾವನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ. ಹೀಗಾಗಿ ಮೋದಿ ಒರಿಜನಲ್ ಅಲ್ಲ, ಡೂಪ್ಲಿಕೇಟ್ ಎಂದು ಲಲನ್ ಸಿಂಗ್ ಆರೋಪಿಸಿದ್ದಾರೆ.

ವಿರಾಟ್ ಕೊಹ್ಲಿಗಾಗಿ ಸ್ನೇಹಿತನ ಹತ್ಯೆ ಮಾಡಿದ ಅಭಿಮಾನಿ..!

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ವಿಧಿವಶ

ಹೈಸ್ಪೀಡ್ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದ ಮೋದಿ..!

About The Author