ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ..

ನಾವು ಕಷ್ಟದಲ್ಲಿರುವಾಗ ಮೊದಲು ನೆನಪಿಸಿಕೊಳ್ಳುವುದೇ ದೇವರನ್ನು. ಅದಕ್ಕಾಗಿಯೇ ಸಂಕಟ ಬಂದಾಗ ವೆಂಕಟರಮಣ ಎಂದು ಹೇಳಿರುವುದು. ಹಿರಿಯರು ಯಾವಾಗಲೂ ದೇವರನ್ನು ಭಕ್ತಿಯಿಂದ ಪೂಜಿಸಿ. ಆಗ ದೇವರು ನಿಮ್ಮನ್ನು ಕಾಪಾಡುತ್ತಾನೆಂದು. ಆದ್ರೆ ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ. ಹಾಗಾದ್ರೆ ಯಾರು ಆ 4 ಜನರು ಅಂತಾ ತಿಳಿಯೋಣ ಬನ್ನಿ..

ಮೊದಲನೇಯವರು ದಾನ ಧರ್ಮ ಮಾಡದೇ ಇರುವವರು. ದೇವರು, ಕಷ್ಟದಲ್ಲಿರುವವರಿಗೆ ಸಹಾಯ ಮಾಡದ. ದಾನ ಧರ್ಮ ಮಾಡದ,, ಕಂಜೂಸುತನ ಮಾಡುವ ಜನರನ್ನ ಎಂದಿಗೂ ಕಾಪಾಡುವುದಿಲ್ಲ. ಅಲ್ಲದೇ ಅಂಥವರಿಗೆ ಸರಿಯಾದ ಮೋಕ್ಷ ಸಿಗುವುದಿಲ್ಲ.

ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು..

ಎರಡನೇಯವರು ಯಾರನ್ನೂ ಗೌರವಿಸದ, ಪ್ರೀತಿಸದ, ಕಾಳಜಿ ತೋರದ ಜನರನ್ನು ದೇವರು ಎಂದಿಗೂ ಕಾಪಾಡುವುದಿಲ್ಲ. ಪುಟ್ಟ ಮಕ್ಕಳಿಗೆ ಪ್ರೀತಿ, ಹಿರಿಯರಿಗೆ ಗೌರವ ಮತ್ತು ತಮ್ಮವರಿಗೆ ಕಾಳಜಿ ತೋರಿಸಬೇಕು ಎನ್ನುತ್ತಾರೆ. ಆದ್ರೆ ಯಾರು ಹೀಗೆ ಗೌರವ, ಪ್ರೀತಿ, ಕಾಳಜಿ ಇಲ್ಲದೇ, ಕ್ರೂರರ ರೀತಿ ನಡೆದುಕೊಳ್ಳುತ್ತಾರೋ, ಅಂಥವರನ್ನು ದೇವರೆಂದೂ ಕ್ಷಮಿಸುವುದಿಲ್ಲ. ಮತ್ತು ಅಂಥವರಿಗೆ ನರಕ ಪ್ರಾಪ್ತಿಯಾಗುತ್ತದೆ.

ಮೂರನೇಯವರು ಕಷ್ಟ ಕಾಲದಲ್ಲಿ ತಮ್ಮವರಿಗೇ ಸಹಾಯಕ್ಕೆ ಬರದವರು. ಎಲ್ಲ ಸಮಯದಲ್ಲೂ ನಿಮಗೆ ಎಲ್ಲರಿಗೂ ಸಹಾಯ ಮಾಡಲು ಆಗದಿರಬಹುದು. ನೀವೇ ಕಷ್ಟದಲ್ಲಿರಬಹುದು. ಆದ್ರೆ ನಿಮ್ಮ ಪರಿವಾರದವರಿದೆ ಕಷ್ಟ ಬಂದಾಗ, ಕೈಲಾದ ಸಹಾಯ ಮಾಡಿ. ಮತ್ತು ಕಷ್ಟ ಬಂದವರನ್ನು ಕಂಡು ಆಡಿಕೊಳ್ಳಬೇಡಿ. ನೀವು ಇಂಥ ಕೆಲಸ ಮಾಡಿದ್ದಲ್ಲಿ, ದೇವರು ನಿಮ್ಮನ್ನೆಂದೂ ಕಾಪಾಡುವುದಿಲ್ಲ.

ಚಪಾತಿ, ದೋಸೆಗೆ ಗುಡ್ ಕಾಂಬಿನೇಷನ್ ಈ ಪಪ್ಪಾಯಿ ಜ್ಯಾಮ್..

ನಾಲ್ಕನೇಯವರು ಜ್ಞಾನ ಪಡೆಯಲು ಹಿಂಜರಿಯುವವರು. ಅಂದರೆ ದಡ್ಡರು, ಮೂರ್ಖರು ಎಂದರ್ಥ.  ನೀವು ಜೀವನಪೂರ್ತಿ ಮೂರ್ಖರಾಗಿಯೇ ಇರುತ್ತೀರಿ ಎಂದರೆ, ದೇವರೆಂದೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ. ಯಾಕಂದ್ರೆ ಮೂರ್ಖನಾಗೇ ಇರುವವನು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ.

About The Author