Saturday, April 19, 2025

Latest Posts

Narendra Modi Speech : ಪ್ರಧಾನಿ ನರೇಂದ್ರ ಮೋದಿ ಭಾಷಣದ  ಪ್ರಮುಖ ಅಂಶಗಳು

- Advertisement -

Dehali News : ದೇಶದೆಲ್ಲೆಡೆ 77ರ ಸ್ವಾತಂತ್ರೋತ್ಸವದ ಸಂಭ್ರಮ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶವನ್ನುದ್ದೇಷಿಸಿ ಮಾತನಾಡಿದ್ರು.

ಮಣಿಪುರ ವಿಚಾರವಾಗಿ ಮಾತನಾಡಿದ ಪ್ರಧಾನಿ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಹಜ ಸ್ಥಿತಿ ಮರಳುತ್ತಿದೆ. ಮಣಿಪುರದಲ್ಲಿ ಶಾಂತಿ ಕಾಪಾಡಲಾಗುವುದು ಎಂದು ಹೇಳಿದರು. ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲಿ ಶಾಂತಿ ನೆಲೆಸುತ್ತಿದೆ, ಶಾಂತಿಯೊಂದೇ ಸಮಾಧಾನದ ಮಾರ್ಗ ಎಂದರು.

ಮೋದಿ ಭಾರತೀಯ ಆರ್ಥಿಕತೆಯ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ರಾಷ್ಟ್ರೀಯ ಭದ್ರತೆ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಿದರು.

ಹಣದುಬ್ಬರ ತಗ್ಗಿಸುವ ಪ್ರಯತ್ನ: ದೇಶದ ಜನರ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ನಾನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ, ನನ್ನ ಪ್ರಯತ್ನ ಮುಂದುವರಿಯುತ್ತದೆ. ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಸರ್ಕಾರ ಯಾವ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತದೋ ಅದು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತದೆ. ಎಂದು ಹೇಳಿದರು.

ಡಿಜಿಟಲ್ ಇಂಡಿಯಾ ಕುರಿತು ಮೋದಿ  ಮಾತು: ಭಾರತವು 1000 ವರ್ಷಗಳ ಗುಲಾಮಗಿರಿ ಮತ್ತು ಮುಂಬರುವ 1000 ವರ್ಷಗಳ ಭವ್ಯ ಹಂತದಲ್ಲಿ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತ ಮಾಡಿದ ಅದ್ಭುತಗಳು ಕೇವಲ ದೆಹಲಿ, ಮುಂಬೈ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿಲ್ಲ. ಟೈರ್ II ಮತ್ತು ಟೈರ್ III ನಗರಗಳು ಸಹ ದಾಖಲೆಗಳನ್ನು ಸೃಷ್ಟಿಸುತ್ತಿವೆ. ನಮ್ಮ ಸಣ್ಣ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿರಬಹುದು. ಆದರೆ ಭರವಸೆ ಮತ್ತು ಆಕಾಂಕ್ಷೆ ಮತ್ತು ಪ್ರಯತ್ನ ಮತ್ತು ಪ್ರಭಾವ ಯಾವುದಕ್ಕೂ ಕಡಿಮೆ ಇಲ್ಲ ಎಂದು ಹೇಳಿದರು.

ಕೊರೊನಾ ನಂತರ ವಿಶ್ವದ ಕ್ರಮ ಬದಲಾಗುತ್ತಿದೆ ಎಂದು ಮೋದಿ  ಹೇಳಿದರು. ಇಂದು ದೇಶವು ಜಿ-20 ಶೃಂಗಸಭೆಯನ್ನು ಆಯೋಜಿಸುವ ಅವಕಾಶವನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಒಂದು ವರ್ಷದಿಂದ, ಜಿ 20ಯಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದು ದೇಶದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ ಎಂದರು.

Narendra Modi : ಪ್ರಧಾನಿ ಭಾಷಣದಲ್ಲಿ ಬದಲಾದ ಮೊದಲ ಸಂಬೋಧನಾ ಪದ ..!

Narendra Modi : ಕೆಂಪುಕೋಟೆಯಲ್ಲಿ 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

Dharawad: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ:

- Advertisement -

Latest Posts

Don't Miss