ಕರ್ನಾಟಕ ಟಿವಿ : ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದುವರೆಗೂ ವಿಪಕ್ಷಗಳು ಮೋದಿ ಬರೀ ಭಾಷಣ ಮಾಡ್ತಾರೆ, ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿಲ್ಲಅಂತ ಆರೋಪ ಮಾಡ್ತಿದ್ರು. ಇದೀಗ 20 ಲಕ್ಷ ಕೋಟಿ ಘೋಷಣೆ ನಂತರ ಮತ್ತೊಂದು ಅದೇಗೆ ಸಾಧ್ಯ ಅನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ.. ಪ್ರಧಾನಿ 20 ಲಕ್ಷ ಕೋಟಿ ಘೋಷಣೆ ಮಾಡಿದ್ದು ಸರಿ ವಲಸಿಗರು ಅವರ ಮನೆಗೆ ತಲುಪುವಂತೆ ಮಾಡಿ ಅವರ ಖಾತೆಗಳಿಗೆ 7,500 ಹಣವನ್ನ ವರ್ಗಾವಣೆ ಮಾಡಿ ಅಂತ ರಾಹುಲ್ ಗಾಂಧಿ ಒತ್ತಾಯ ಮಾಡಿದ್ದಾರೆ.. ಇಂದು ಭಾರತ ಮಾತೆ ಅಳುತ್ತಿದೆ. ಏಕೆಂದರೆ ಭಾರತ ಮಾತೆಯ ಕೋಟ್ಯಂತರ ಮಕ್ಕಳ ಹಸಿವು, ಬಾಯಾರಿಕೆಯಿಂದ ಬೀದಿಗಳಲ್ಲಿ ನಡೆಯುತ್ತಿದ್ದಾರೆ ಅಂತ ಮೋದಿಯನ್ನ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನಮೋ ಅಂದ್ರೆ “ನೋ ಆಕ್ಷನ್, ಮೆಸೇಜಿಂಗ್ ಓನ್ಲಿ” ಅಂತ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಟೀಕಿಸಿದ್ದಾರೆ. ಇನ್ನು ಮೋದಿ ಹೆಡ್ ಲೈನ್ ಕೊಟ್ಟು ಖಾಲಿ ಪೇಕ್ ಕೊಟ್ಟಿದ್ದಾರೆ ಅಂತ ಮಾಜಿ ಹಣಕಾಸು ಸಚಿವ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಟೀಕಿಸಿದ್ದಾರೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ