ಕರ್ನಾಟಕ ಟಿವಿ : ಮೇ 17ಕ್ಕೆ 3ನೇ ಹಂತದ ಲಾಕ್ ಡೌನ್ ಮುಕ್ತಾಯವಾಗುತ್ತೆ. ಈ ಸಂಬಂಧ ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡ್ತಿದ್ದಾರೆ. ಬಹುತೇಕ ಲಾಕ್ ಡೌನ್ 4.0 ಕೇವಲ ಕಂಟೈನ್ಮೆಂಟ್ ಝೋನ್ ನಲ್ಲಿ ಮಾತ್ರ ಜಾರಿ ಮಾಡಿ ಉಳಿದೆಡೆ ಸಂಪೂರ್ಣವಾಗಿ ಲಾಕ್ ಡೌನ್ ತೆರವು ಮಾಡುವುದರ ಮೂಲಕ ವ್ಯಾಪಾರ, ವ್ಯವಹಾರ ಎಂದಿನಂತೆ ನಡೆಯಬೇಕು ಅನ್ನೋದು ಪ್ರಧಾನಿ ಮೋದಿ ನಿಲುವು. ಆದ್ರೆ, ಮೇ 31ರ ವರೆಗೆ ಲಾಕ್ ಡೌನ್ ಮುಂದುವರೆಸುವಂತೆ ಕೆಲ ಸಿಎಂಗಳು ಹಠ ಹಿಡಿದಿದ್ದಾರೆ.. ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ, ಪ. ಬಂಗಾಳ, ಬಿಹಾರ ಹಾಗೂ ತಮಿಳುನಾಡು ಸಿಎಂಗಳೂ ಸಂಪೂರ್ಣ ಲಾಕ್ ಡೌನ್ ಮುಂದುವರೆಸುವಂತೆ ಒತ್ತಾಯ ಮಾಡಿದ್ದಾರೆ..
ಅಷ್ಟಕ್ಕೂ ಈ ರಾಜ್ಯಗಳು ಯಾಕೆ ಲಾಕ್ ಡೌನ್ ಮುಂದುವರೆಸುವಂತೆ ಒತ್ತಾಯ ಮಾಡ್ತಿವೆ ಅಂದ್ರೆ, ಮಹಾರಾಷ್ಟ್ರದಲ್ಲಿ 23,401 ಸೋಂಕಿತರಿದ್ದು 868 ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್ ನಲ್ಲಿ 1877 ಸೋಂಕಿತರಿದ್ದು 31 ಮಂದಿ ಸಾವನ್ನಪ್ಪಿದ್ದಾರೆ. ತೆಲಂಗಾಣದಲ್ಲಿ 1275 ಸೋಂಕಿತರಿದ್ದು 30 ಮಂದಿ ಸಾಅವನ್ನಪ್ಪಿದ್ದಾರೆ. ಪ. ಬಂಗಾಳದಲ್ಲಿ 2063 ಸೊಂಕಿತರಿದ್ದು 190 ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ 749 ಸೋಂಕಿತರಿದ್ದು 6 ಮಂದಿ ಸಾಅವನ್ನಪ್ಪಿದ್ದಾರೆ. ತಮಿಳುನಾಡು ಕಳೆದು ಹತ್ತು ದಿನಗಳಲ್ಲಿ ರಾಕೆಟ್ ವೇಗದಲ್ಲಿ ಸೋಂಕು ಹೆಚ್ಚಾಗಿದೆ. ಹೀಗಾಗಿ ತಮಿಳುನಾಡು ಲಾಕ್ ಡೌನ್ ಮುಂದುವರೆಸಲು ಒತ್ತಾಯಿಸುತ್ತಿದೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ,