ಕರ್ನಾಟಕ ಟಿವಿ : ಮೋದಿ ಸಿಎಂಗಳ ಜೊತೆಗಿನ ಸಭೆ ಕೇವಲ ಶಾಸ್ತ್ರಕ್ಕೆ ಮಾತ್ರ.. ಮೋದಿ ತಾನು ನಿರ್ಧಾರ ಮಾಡಿದಂತೆ ಘೋಷಣೆ ಮಾಡೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಹುತೇಕ ಮೋದಿ ಲಾಕ್ ಡೌನ್ ಕಂಟೈನ್ಮೆಂಟ್ ಝೋನ್ ಗಳಿಗೆ ಮಾತ್ರ ಸೀಮಿತಗೊಳಿಸಿ ಉಳಿದೆಡೆ ಒಂದಷ್ಟು ನಿರ್ಬಂಧ ವಿಧಿಸಿ ಬಹುತೇಕ ಜನಸಾಮಾನ್ಯರಿಗೆ ಫ್ರೀ ಮಾಡಿಕೊಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಮೊದಲೆರಡು ಹಂತ ಲಾಕ್ ಡೌನ್ ಗೂ ಮೂರನೇ ಹಂತದ ಲಾಕ್ ಡೌನ್ ಗೂ ಬಹಳ ವ್ಯತ್ಯಾಸ ಇದೆ. ಜನ ಲಾಕ್ ಡೌನ್ ಬಗ್ಗೆ ಬೇಸತ್ತಿದ್ದಾರೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರೋದನ್ನ ಬಹಳಷ್ಟು ಜನ ಕಲಿತಿದ್ದಾರೆ. ಕೆಲವರು ಹೇಗೊದ್ರೂ ರೂಲ್ಸ್ ಬ್ರೇಕ್ ಮಾಡ್ತಾರೆ ಅಂತವರಿಗೂ ಕಾನೂನಿನ ಮೂಲಕ ಮಟ್ಟಹಾಕೋದು, ಲಾಕ್ ಡೌನ್ ಸಡಿಲಿಕೆ ಮಾಡೋದು ಅನ್ನೋದು ಮೋದಿ ಲೆಕ್ಕಾಚಾರ.
ಲಾಕ್ ಡೌನ್ 4.0 ಹೇಗಿರುತ್ತೆ..?
ಕಂಟೈನ್ಮೆಂಟ್ ಝೋನ್ ಗೆ ಮಾತ್ರ ಸೀಮಿತ
ಸೊಂಕಿತರು ಇರುವ ಪ್ರದೇಶದಲ್ಲಿ ಕಠಿಣ ಲಾಕ್ ಡೌನ್
ದೇಶದೆಲ್ಲಡೆ ಮಾಸ್ಕ್ ಧರಿಸುವುದು ಕಡ್ಡಾಯ
ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಸಾಧ್ಯತೆ
ಅದ್ದೂರಿ ಸಭೆ-ಸಮಾರಂಭಗಳಿಗೆ ಅನುಮತಿ ಇಲ್ಲ
100 ಜನರಿಗೆ ಮಿತಿ ವಿಧಿಸಿ ಸರಳ ಸಮಾರಂಭಕ್ಕೆ ಅವಕಾಶ
ದೈಹಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವ ಸಾಧ್ಯತೆ
ಪ್ರವಾಸೋದ್ಯಮಕ್ಕೆ ಅನುಮತಿ ಸದ್ಯಕ್ಕೆ ಇಲ್ಲ
ವರ್ಕ್ ಫ್ರಂ ಹೋಂಗೆ ಹೆಚ್ಚು ಉತ್ತೇಜನ ನೀಡುವುದು
ಉತ್ಪಾದನ ಘಟಕಗಳಲ್ಲಿ ಶೇಕಡ 50-70% ಉದ್ಯೋಗಿಗಳಿಂದ ಕಾರ್ಯ
ಲಾಕ್ ಡೌನ್ 4.0
ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ
ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್
ಜೂನ್ ನಂತರ ಕೊರೊನಾ ಉಚಿತ ಚಿಕಿತ್ಸೆ ಡೌಟ್
ಸೋಂಕಿತರ ಆರೋಗ್ಯ ಗಂಭೀರವಾದ್ರೆ ಮಾತ್ರ ಆಸ್ಪತ್ರೆ
ಮಹಾಷ್ಟ್ರದಲ್ಲಿ ಸಿಎಂ ಉದ್ಧಾವ್ ಠಾಕ್ರೆ ಆಸ್ತಿ ಎಷ್ಟು ಕೋಟಿ..?

