Saturday, October 5, 2024

Latest Posts

ಡಿಕೆಶಿ ಆಸ್ತಿ 840 ಕೋಟಿ, ಮೋದಿ ಆಸ್ತಿಯಷ್ಟು ಕೋಟಿ..?

- Advertisement -

ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಬಂಧನಕ್ಕೆ ಒಳಪಟ್ಟ ಬೆನ್ನಲ್ಲೆ ಬೇರೆ ರಾಜಕಾರಣಿಗಳ ಆಸ್ತಿ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಡಿಕೆಶಿ ಬೆಂಬಲಿಗರು ಅಮಿತ್ ಶಾ, ಮೋದಿ ವಿರುದ್ಧ ಸಿಡಿದೆದ್ದಿದ್ದಾರೆ.

ಹಾಗಾದ್ರೆ ಮೋದಿ ಆಸ್ತಿ ಎಷ್ಟಿದೆ..?

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ರು. ಈ ವೇಳೆ ತನ್ನ ಬಳಿ ಇರುವ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. 2001ರಿಂದ 2014ರ ವರೆಗೆ ಗುಜರಾತ್ ಸಿಎಂ ಆಗಿದ್ದ ಮೋದಿ 2014ರಿಂದ ಪ್ರಧಾನಿಯಾಗಿದ್ದೂ ಆಸ್ತಿ 2 ಕೋಟಿ 50 ಲಕ್ಷ ಘೋಷಣೆ ಮಾಡಿಕೊಂಡಿದ್ದಾರೆ. 2014 ರಲ್ಲಿ 1 ಕೋಟಿ 65 ಲಕ್ಷ ಘೋಷಣೆ ಮಾಡಿಕೊಂಡಿದ್ದ ಮೋದಿ ಆಸ್ತಿ 2018ರ ವೇಳೆಗೆ 52% ಏರಿಕೆಯಾಗಿದೆ.

ಮೋದಿ ಕೈಯಲ್ಲಿ 38,750 ರೂ ಕ್ಯಾಶ್ ಇದ್ದು ಬ್ಯಾಂಕ್ ಖಾತೆಯಲ್ಲಿ 4,143 ರೂಪಾಯಿ ಇದೆ. ಆದ್ರೆ 1 ಕೋಟಿ 27 ಲಕ್ಷ ಠೇವಣಿ ಇಟ್ಟಿರುವ ಮೋದಿ ಬಳಿ 1.13 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಇದಲ್ಲದೆ 11.95 ಲಕ್ಷ ಇತರೆ ಮೂಲದ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ. ಮೋದಿ ಘೋಷಣೆ ಪ್ರಕಾರ ಮನೆ ಮೌಲ್ಯ 1.20 ಕೋಟಿ..

ಯಸ್, ನಿಮ್ಮ ಪ್ರಕಾರ ಮೋದಿ ಆಸ್ತಿ ಬಗ್ಗೆ ಅಭಿಪ್ರಾಯ ಏನು..? ಮೋದಿ ಪ್ರಾಮಾಣಿಕರಾ ಅನ್ನೋ ಬಗ್ಗೆ ಕಾಮೆಂಟ್ ಮಾಡಿ. ಹಾಗೆಯೇ ಡಿಕೆಶಿ ವಿರುದ್ಧ ಮೋದಿ- ಅಮಿತ್ ಶಾ ಸೇಡಿನ ರಾಜಕಾರಣ ಮಾಡ್ತಿದ್ದಾರಾ ಅನ್ನೋ ಬಗ್ಗೆ ಕಾಮೆಂಟ್ ಮಾಡಿ

- Advertisement -

Latest Posts

Don't Miss