News: ಯಾರದ್ದಾದರೂ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಸಡನ್ ಆಗಿ ಆ ವ್ಯಕ್ತಿ ಕಣ್ಣು ತೆಗೆದು ಎಲ್ಲರನ್ನೂ ನೋಡಿದರೆ, ಹೇಗನ್ನಿಸುತ್ತದೆ..? ಕೆಲವರಿಗೆ ಖುಷಿಯಾಗುತ್ತದೆ. ಇನ್ನು ಕೆಲವರಿಗೆ ಹೆದರಿಕೆಯಾಗುತ್ತದೆ. ಸ್ವಲ್ಪ ಸಮಯದ ಬಳಿಕ, ವ್ಯಕ್ತಿ ಸತ್ತಿಲ್ಲ, ಬದುಕಿದ್ದಾನೆಂದು ಅರ್ಥವಾಗುತ್ತದೆ.
ಇದೇ ರೀತಿ ಘಟನೆ ನಾಗ್ಪುರದ ರಾಮ್ಟೆಕ್ ಎಂಬಲ್ಲಿ ನಡೆದಿದೆ. ಗಂಗಾಬಾಯಿ ಸಾವ್ಜಿ ಸಖ್ರಾ ಎಂಬ 103 ವರ್ಷದ ವೃದ್ಧೆ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದರು. ಪ್ರತಿದಿನ 2 ಸ್ಪೂನ್ ನೀರು ಸೇವಿಸುತ್ತಿದ್ದರು. ಆದರೆ ಸೋಮವಾರ ಅವರ ದೇಹದ ಚಲನೆ ನಿಂತ ಪರಿಣಾಮ ಅವರು ತೀರಿಹೋಗಿದ್ದಾರೆಂದೇ ಎಲ್ಲರೂ ಭಾವಿಸಿದ್ದರು. ಹಾಗಾಗಿ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಲಾಗಿತ್ತು.
ಬೇರೆ ಬೇರೆ ರಾಜ್ಯದಿಂದ ಸಂಬಂಧಿಸಕರು ಅಂತ್ಯಸಂಸ್ಕಾರಕ್ಕೆ ಬಂದಿದ್ದರು. ಕಾಲಿನ ಬೆರಳಿಗೆ ದಾರ ಕಟ್ಟಿ ಚಟ್ಟ ರೆಡಿ ಮಾಡಿ, ಇನ್ನೇನು ಅಂತ್ಯಸಂಸ್ಕಾರಕ್ಕೆ ಕೆಲವೇ ಗಂಟೆ ಇರುವಾಗ, ಅಜ್ಜಿಯ ಕಾಲು ಅಲ್ಲಾಡಿದೆ. ಇದನ್ನು ಅಲ್ಲೇ ಇದ್ದವರು ಗಮನಿಸಿದ್ದು, ಅಜ್ಜಿಗೆ ಸುತ್ತಿದ್ದ ದಾರವನ್ನೆಲ್ಲ ಬಿಚ್ಚಿದಾಗ, ಆಕೆ ಉಸಿರಾಡಲು ಶುರು ಮಾಡಿದ್ದಾಳೆ. ಅಲ್ಲಿನ ಸ್ಥಳೀಯ ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದಾರೆ.




