National News: ಜೆಮಿನಾಯ್ ನ್ಯಾನೋ ಬನಾನಾ ಎಐ ಟ್ರೆಂಡಿಂಗ್ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳು ಕೆಂಪು ಸೀರೆ ಉಟ್ಟು ರೋಸ್ ಮುಡಿದು ಪೋಸ್ ನೀಡುತ್ತಿರುವ ಫೋಟೋಗಳು ರಾರಾಜಿಸುತ್ತಿದೆ. ಕೆಲವರಿಗೆ ಈ ಫೋಟೋ ನಿಜವಾ..? ಇವರು ಇಷ್ಟು ಚಂದವಾ ಅನ್ನೋ ಅನುಮಾನವೂ ಶುರುವಾಗಿದೆ. ಆದರೆ ಈ ಟ್ರೆಂಡಿಂಗ್ ತುಂಬಾ ಡೇಂಜರಸ್ ಅಂತಾ ಇದ್ದಾಳೆ ಈ ಹುಡುಗಿ.
ಝಲಕ್ ಭವ್ನಾನಿ ಎಂಬ ಯುವತಿ ಈ ಬಗ್ಗೆ ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಖತ್ ಸೌಂಡ್ ಮಾಡುತ್ತಿದೆ. ಈಕೆ ಹೇಳಿದ್ದೇನೆಂದರೆ, ನಾನು ದೇಹ ಪೂರ್ತಿ ಮುಚ್ಚಿರುವ ಫೋಟೋವನ್ನು ಅಪ್ಲೋಡ್ ಮಾಡಿ, ಅದನ್ನು ಎಐಗೆ ಕನ್ವರ್ಟ್ ಮಾಡಲು ಪ್ರಯತ್ನಿಸಿದ್ದೆ. ಆದರೆ ಆಶ್ಚರ್ಯವೇನೆಂದರೆ, ನನಗೆ ಬಲಗೈ ಮೇಲೆ ಇರುವ ಮಚ್ಛೆ ಕೂಡ ಈ ಫೋಟೋದಲ್ಲಿ ತೋರಿಸಲಾಗಿದೆ.
ಆದರೆ ನಾನು ಮುಖ ಬಿಟ್ಟು ದೇಹದ ಯಾವ ಭಾಗ ಕೂಡ ಕಾಣದಂಥ ಫೋಟೋ ನೀಡಿದ್ದೆ. ಆದರೆ ಎಐಗೆ ಈ ಪಿಕ್ ಕನ್ವರ್ಟ್ ಆಗುವ ವೇಳೆ ಸ್ವಿಲವ್‌ಲೆಸ್ ಬ್ಲೌಸ್‌ನಲ್ಲಿ ನನ್ನ ಕೈ ಮೇಲಿದ್ದ ಮಚ್ಛೆಯೂ ಕಂಡಿದೆ. ಇದು ಹೇಗೆ ಸಾಧ್ಯ..? ಈಗಿನ ಎಐಗಳು ತುಂಬಾ ಡೇಂಜರಸ್ ಎಂದು ಈಕೆ ಹೇಳಿದ್ದಾರೆ.
ಹಾಗಾದ್ರೆ ನಮ್ಮ ಬೆತ್ತಲೆ ಫೋಟೋಗಳನ್ನೂ ಈ ಎಐ ಕ್ಯಾಪ್ಚರ್ ಮಾಡತ್ತಾ ಅಂತಾ ಕೇಳಿದ್ರೆ, ಉತ್ತರ ತಿಳಿದಿಲ್ಲ. ಆದರೆ ಹೀಗೆ ಕೈ ಮೇಲಿರುವ ಮಚ್ಛೆ ಕಾಣಲು ಕಾರಣವೇನಿರಬಹುದು ಎಂಬ ಬಗ್ಗೆ ತಿಳಿದವರು ವಿವರಿಸಿದ್ದಾರೆ. ನಾವು ಗೂಗಲ್ ಸ್ಟೋರ್‌ನಲ್ಲಿ ನಮ್ಮ ಫೋಟೋಗಳನ್ನು ಸೇವ್ ಮಾಡಿರುತ್ತೇವೆ. ಅಂದರಲ್ಲಿ ನಾವು ಸ್ಲಿವ್‌ಲೆಸ್ ಉಡುಪು ಧರಿಸಿದಾಗ, ನಮ್ಮ ಕೈ ಮೇಲಿದ್ದ ಮಚ್ಛೆಯ ಬಗ್ಗೆ ಗೂಗಲ್ ತಿಳಿದಿರುತ್ತದೆ. ಹಾಗಾಗಿ ಎಐ ಪಿಕ್ ಕ್ರಿಯೇಟ್ ಮಾಡುವಾಗ, ಅದನ್ನು ಗುರುತಿಸಿ ಹಾಕಿರಬಹುದು. ಹಾಗಾಗಿ ನಾವು ನಮ್ಮ ಸೆಲ್ ಫೋನ್‌ನಲ್ಲಿ ಯಾವುದೇ ಫೋಟೋ ತೆಗೆದುಕ“ಳ್ಳುವುದಿದ್ದರೂ ಎಚ್ಚರಿಕೆಯಿಂದಿರಬೇಕು ಎಂದಿದ್ದಾರೆ.