National News: ಮುಂಬೈ -ಸೋಲಾಪುರ ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಓರ್ವ ವ್ಯಕ್ತಿ ಹಾವನ್ನು ಬಿಟ್ಟು ಮಜಾ ತೆಗೆದುಕ“ಳ್ಳುವ ಪ್ರಯತ್ನ ಮಾಡಿದ್ದಾನೆ. ಸದ್ಯ ರೈಲ್ವೆ ರಕ್ಷಣಾ ಇಲಾಖೆ ಆತನನ್ನು ಬಂಧಿಸಿದ್ದಾರೆ.
50 ದಿನಗಳ ಹಿಂದೆ ಈತ ಹಾವಿನ ಜತೆ ಮುಂಬೈ-ಸೋಲಾಪುರ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಶೌಚಾಲಯದಲ್ಲಿ ಬೇಕಂತಲೇ ಹಾವು ಬಿಟ್ಟು , ಮಜಾ ತೆಗೆದುಕ“ಂಡಿದ್ದಾನೆ. ಕೆಲ ಸಮಯ ಪ್ರಯಾಣಿಕರು ಕಂಗಾಲಾಗಿಯೇ ರೈಲಿನಲ್‌ಲಿ ಚಲಿಸಿದ್ದಾರೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಸಿಸಿಟಿವಿ ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಸದ್ಯ ಈತನ ಬಂಧನವಾಗಿದ್ದು, ನಾಸಿಕ್ ನಿವಾಸಿ ಜಗನ್ ಅರ್ಜುನ್ ಭಾಲೆ(37) ಬಂಧಿತ ಆರೋಪಿಯಾಗಿದ್ದಾನೆ. ವಿಚಾರಣೆ ನಡೆಸಿದಾಗ, ಎಲ್ಲರಿಗೂ ಕಂಗಾಲು ಮಾಡಲೆಂದೇ ಈ ಕೆಲಸ ಮಾಡಿದ್ದಾಗಿ ಹೇಳಿದ್ದಾನೆ. ಸದ್ಯ ಈತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.
#नासिक के जगन अर्जुन भाले ने डेढ़ महीने पहले वंदे भारत एक्सप्रेस के टॉयलेट में घोड़ा पछाड़ सांप छोड़ दिया था. CCTV फुटेज के जरिए आज जगन को RAF ने गिरफ्तार किया है. pic.twitter.com/72mttD5iKU
— Narendra Pratap (@hindipatrakar) February 14, 2026




