National News: ಮಕ್ಕಳನ್ನು ನಾವು ಎಷ್ಟು ಜಾಗೃತವಾಗಿ ನೋಡಿಕೊಂಡರೂ, ಕಡಿಮೆಯೇ ಅಂತಾ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೂ ಕೆಲವು ಅಜಾಗರೂಕತೆಯಿಂದ ಮಕ್ಕಳ ಜೀವಕ್ಕೇ ಕುತ್ತು ಬರುತ್ತದೆ. ಅಂಥದ್ದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ವಿಕ್ಸ್ ಡಬ್ಬದ ಮುಚ್ಚಳ ನುಂದಿನ 14 ತಿಂಗಳ ಕಂದಮ್ಮ ಸಾವಿಗೀಡಾಗಿದೆ.
ರಾಜಸ್ಥಾನದ ಬನ್ಸಾರಾದಲ್ಲಿ ಈ ಘಟನೆ ನಡೆದಿದ್ದು, ದಂಪತಿ ಮದುವೆಯಾಗಿ 18 ವರ್ಷವಾದ ಬಳಿಕ ಅವರಿಗೆ ಗಂಡು ಮಗು ಜನಿಸಿತ್ತು. ಮಗುವಿಗೆ ಮಾನ್ವಿಕ್ ಎಂದು ಹೆಸರಿಡಲಾಗಿತ್ತು. ಮಗು ತನ್ನಷ್ಟಕ್ಕೆ ತಾನು ಆಡುತ್ತಿದೆ ಎಂದು, ಅಪ್ಪ ಅಮ್ಮ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಡೆ ಮಗು ವಿಕ್ಸ್ ಡಬ್ಬದ ಮುಚ್ಚಳ ನುಂಗಿ, ಉಸಿರಾಡಲು ಆಗದೇ ಒದ್ದಾಡಿದೆ.
ವಿಷಯ ಗೊತ್ತಾದ ಪೋಷಕರು ಮಗುವಿನ ಗಂಟಲಿನಿಂದ ಮುಚ್ಚಳ ಹೊರ ತೆಗೆಯಲು ಪ್ರಯತ್ನಿಸಿದ್ದಾರೆ. ಬಳಿಕ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿದೆ. ಆದರೆ ವೈದ್ಯರು ಸಕಾಲದಲ್ಲಿ ಸಿಗದ ಕಾರಣ, ಮಗುವಿನ ಸಾವಾಗಿದೆ ಎಂದು ಕುಟಂುಬಸ್ಥರು ಆರೋಪಿಸಿದ್ದಾರೆ. ಮಗುವಿನ ಕೈಗೆ ವಿಕ್ಸ್ ಡಬ್ಬ ಸಿಗದೇ ಇರುವ ರೀತಿ ನೋಡಿಕೊಂಡಿದ್ದರೆ, ಮಗು ಬದುಕಿರುತಿತ್ತೇನೋ ಎಂದು ನೆಟ್ಟಿಗರು ಬೇಸರ ಹೊರಹಾಕಿದ್ದಾರೆ.