Wednesday, June 18, 2025

Latest Posts

National News: ಬೆಚ್ಚಿ ಬೀಳಿಸುತ್ತೆ ಜಾಗತಿಕ ಧಾರ್ಮಿಕ ಅಂಕಿ ಸಂಖ್ಯೆ..! : ಈ ಧರ್ಮವೇ ಅತಿ ದೊಡ್ಡದಂತೆ.

- Advertisement -

National News: 2010 ಮತ್ತು 2020ರ ನಡುವಿನ ಅವಧಿಯಲ್ಲಿ ಜಾಗತಿಕವಾಗಿ ಮುಸ್ಲಿಮರ ಸಂಖ್ಯೆ ಏರಿಕೆ ಕಂಡಿದೆ. ಕ್ರಿಶ್ಚಿಯನ್ನರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು 218 ಕೋಟಿಯಿಂದ 230 ಕೋಟಿಗೆ ಹೆಚ್ಚಳವಾಗಿದೆ. ಆದರೆ, ಜಾಗತಿಕ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರ ಪಾಲು ಶೇಕಡಾ 30.6 ರಷ್ಟು ಇದ್ದಿದ್ದು ಈಗ ಶೇಕಡಾ 28.8ಕ್ಕೆ ಕುಸಿದಿದೆ. ಇನ್ನೂ ಹಿಂದೂಗಳ ಸಂಖ್ಯೆ ಸ್ಥಿರವಾಗಿದೆ ಎಂದು ಪ್ಯೂ ಸಂಶೋಧನಾ ಕೇಂದ್ರದ ವರದಿ ತಿಳಿಸಿದೆ.

ಕ್ರೈಸ್ತ ಧರ್ಮ ಅತಿದೊಡ್ಡ ಧಾರ್ಮಿಕ ಗುಂಪಾಗಿದೆ..

ಸುಮಾರು 2700 ಜನಗಣತಿ ವರದಿ ಮತ್ತು ಸಮೀಕ್ಷೆಗಳನ್ನು ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕ್ರೈಸ್ತ ಧರ್ಮ ಈಗಲೂ ಅತಿದೊಡ್ಡ ಧಾರ್ಮಿಕ ಗುಂಪಾಗಿ ಉಳಿದಿದೆ. ಕ್ರೈಸ್ತರ ಸಂಖ್ಯೆ 218 ಕೋಟಿಯಿಂದ 230 ಕೋಟಿಗೆ ಏರಿಕೆಯಾಗಿದೆ.

ಕುಸಿದ ಕ್ರಿಶ್ಚಿಯನ್ನರ ಸಂಖ್ಯೆ, 200 ಕೋಟಿಗೆ ಏರಿದ ಮುಸ್ಲಿಮರು..

ಅಂದರೆ 12.2 ಕೋಟಿ ಹೆಚ್ಚಳವಾಗಿದೆ. ಆದರೆ ಜಾಗತಿಕವಾಗಿ ಕ್ರಿಶ್ಚಿಯನ್ನರ ಪಾಲು ಅಂದಾಜು ಶೇಕಡಾ 30.6ರಿಂದ ಶೇಕಡಾ 28.8ಕ್ಕೆ ಕುಸಿದಿದೆ. ಇದೇ ವೇಳೆ, ಮುಸ್ಲಿಮರ ಸಂಖ್ಯೆಯಲ್ಲಿ 34.7 ಕೋಟಿ ಹೆಚ್ಚಳವಾಗಿದ್ದು ಅವರ ಒಟ್ಟಾರೆ ಸಂಖ್ಯೆ 200 ಕೋಟಿಗೆ ಹೆಚ್ಚಿದೆ. ಇನ್ನೂ ಜಾಗತಿಕವಾಗಿ ಮುಸ್ಲಿಮರ ಪಾಲು ಶೇಕಡಾ 1.8 ಹೆಚ್ಚಳದೊಂದಿಗೆ ಶೇಕಡಾ 25.6ಕ್ಕೆ ಏರಿಕೆಯಾಗಿದೆ ಎಂದು ಪ್ಯೂ ವರದಿ ತಿಳಿಸಿದೆ.

120 ಕೋಟಿಗೆ ಏರಿದ ಹಿಂದೂಗಳ ಸಂಖ್ಯೆ..

ಅಲ್ಲದೆ 2020ರ ಅಂಕಿ ಸಂಖ್ಯೆ ಪ್ರಕಾರ, ಜಾಗತಿಕ ಜನಸಂಖ್ಯೆ ಬೆಳವಣಿಗೆಗೆ ಹೋಲಿಸಿದರೆ ಹಿಂದೂಗಳು ಶೇಕಡಾ 14.9 ಮತ್ತು ಯಹೂದಿಗಳ ಸಂಖ್ಯೆಯು ಸ್ಥಿರವಾಗಿದೆ. ಹಿಂದೂಗಳ ಸಂಖ್ಯೆಯಲ್ಲಿ 12.6 ಕೋಟಿ ಹೆಚ್ಚಳದೊಂದಿಗೆ 120 ಕೋಟಿಗೆ ಏರಿಕೆಯಾಗಿದೆ.

ಇನ್ನೂ ಯಹೂದಿಗಳ ಸಂಖ್ಯೆ 10 ಲಕ್ಷ ಹೆಚ್ಚಳದೊಂದಿಗೆ 1.48 ಕೋಟಿಗೆ ಹೆಚ್ಚಳವಾಗಿದೆ. ಅಲ್ಲದೆ ಈ ಧರ್ಮಗಳನ್ನು ಹೊರತುಪಡಿಸಿ ಉಳಿದವರ ಜಾಗತಿಕ ಜನಸಂಖ್ಯೆ ಶೇಕಡಾ 23.3ರಿಂದ ಶೇಕಡಾ 24.2ಕ್ಕೆ ಏರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂದು ದಶಕಕ್ಕೂ ಹಿಂದಿನದಕ್ಕಿಂತ 2020ರಲ್ಲಿ ಕಡಿಮೆ ಜನರನ್ನು ಹೊಂದಿದ್ದ ಏಕೈಕ ಪ್ರಮುಖ ಧಾರ್ಮಿಕ ಗುಂಪು ಬೌದ್ಧ ಸಮುದಾಯವಾಗಿದೆ.

ಸಂತಾನೋತ್ಪತ್ತಿ ದರದ ಏರಿಕೆಯಿಂದ ಸಮುದಾಯಗಳ ಹೆಚ್ಚಳ..

ಪ್ರಮುಖವಾಗಿ ಸಂತಾನೋತ್ಪತ್ತಿ ದರದ ಏರಿಕೆಯು ಸಾಮಾನ್ಯವಾಗಿ ಸಮುದಾಯಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದಕ್ಕೆ ಮರಣ ದರದ ಕೊಡುಗೆ ನೀಡಿದರೂ ಅಷ್ಟೇನೂ ಮಹತ್ವವನ್ನು ಪಡೆದುಕೊಳ್ಳುವುದಿಲ್ಲ. ಮುಸ್ಲಿಮರು ಯುವ ಜನಸಂಖ್ಯೆ ಮತ್ತು ಹೆಚ್ಚಿನ ಫಲವತ್ತತೆ ಎರಡರಿಂದಲೂ ಲಾಭ ಪಡೆದಿದ್ದಾರೆ. ಹಿಂದೂಗಳು ಜಾಗತಿಕ ಫಲವತ್ತತೆಯ ಸರಾಸರಿ 2.1ರ ಹತ್ತಿರದಲ್ಲೇ ಇದ್ದಾರೆ. ವಯಸ್ಸಾದವರ ಸಂಖ್ಯೆಯೇ ಹೆಚ್ಚಿರುವುದರಿಂದ ಯಹೂದಿಗಳು ಈ ವಿಷಯದಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ವರದಿ ಹೇಳಿದೆ.

- Advertisement -

Latest Posts

Don't Miss