ಕರ್ನಾಟಕ ಟಿವಿ : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. ಅದೆನಪ್ಪಅಂದ್ರೆ ಶಾಲೆಗಳ ಆರಂಭ ಮಾಡುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.. ಅಯ್ಯೋ ಇದು ಬ್ಯಾಡ್ ನ್ಯೂಸ್ ಅಂತೀರಾ..? ಇಲ್ಲ ಇದು ಗುಡ್ ನ್ಯೂಸ್. ಯಾವ ರೀತಿ ಅಂದ್ರೆ, 50% ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗಬೇಕು.. ಅಂದ್ರೆ ಸಮ ಸಂಖ್ಯೆ, ಬೆಸ ಸಂಖ್ಯೆ ಮಾದರಿ.ಅಟೆಂಡೆನ್ಸ್ ನಂಬರ್ 1,3,5,7,9ರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕ್ಲಾಸ್ ಇದ್ದಾಗ 2,4,6,8,10 ವಿದ್ಯಾರ್ಥಿಗಳಿಗೆ ರಜೆ.. ಹೀಗೆ ಸಮ-ಬೆಸ ಸಂಖ್ಯೆ ವಿದ್ಯಾರ್ಥಿಗಳಿಗೆ ತರಗತಿ ನಡೆಸುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು ಅನ್ನೋದು ಸಲಹೆ.. ಅಂದ್ರೆ ನಿಮ್ಮಅಟೆಂಡೆನ್ಸ್ ನಂಬರ್ ನ ಆಧಾರದ ಮೇಲೆ 50% ವಿದ್ಯಾರ್ಥಿಗಳಿಗೆ ತರಗತಿ ಆರಂಭ ಮಾಡುವ ಕುರಿತು ಮಿನಿಸ್ಟ್ರಿ ಆಫ್ ಹ್ಯೂಮನ್ ರಿಸೋರ್ಸ್ ಡೆವಲಪ್ ಮೆಂಟ್ ಹಾಗೂ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನ್ ರಿಸರ್ಚ್ ಅಂಡ್ ಟ್ರೈನಿಂಗ್. ಈ ಸಂಬಂಧ ಒಮ್ಮತದ ಅಭಿಪ್ರಾಯವನ್ನ ಸೂಚಿಸಿದೆ.. ಇದರ ಜೊತೆ ಡಿಜಿಟಲ್ ಕ್ಲಾಸ್ ಬಗ್ಗೆಯೂ ಸಹ ಸಲಹೆ ನೀಡಿದೆ.. ದೇಶಾದ್ಯಂತ ಶಾಲೆಗಳನ್ನ ಓಪನ್ ಮಾಡಿ ಈ ಮಾದರಿಯಲ್ಲಿ ತರಗತಿ ನಡೆಸಲು ಕೇಂದ್ರ ಸರ್ಕಾರಕ್ಕೆ ಎಂಹೆಚ್ ಆರ್ ಡಿ, ಎನ್ ಇ ಸಿಆರ್ ಟಿ ಸಲಹೆ ನೀಡಿದೆ. ಸಿಂಪಲ್ಲಾಗಿ ಹೇಳಬೇ ಅಂದ್ರೆ ಒಂದು ದಿನ ಕ್ಲಾಸ್ ಒಂದು ದಿನ ರಜೆ..



