Friday, July 18, 2025

Latest Posts

National Political News: ಪಾಕ್​ ಗೊಡ್ಡು ಬೆದರಿಕೆಗೆ! ಸಿಎಂ ಖಡಕ್ ಕೌಂಟರ್.!

- Advertisement -

National Political News: ಭಾರತಕ್ಕೆ ಬ್ರಹ್ಮಪುತ್ರ ನದಿಯ ಹರಿವನ್ನು ಚೀನಾ ಕೂಡ ನಿಲ್ಲಿಸಬಹುದು ಎಂದು ಹೇಳುವ ಮೂಲಕ ಪಾಕಿಸ್ತಾನ ಇನ್ನೊಂದು ಬೆದರಿಕೆಯ ತಂತ್ರವನ್ನು ಅನುಸರಿಸಲು ಮುಂದಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪಾಕ್ ವಿರುದ್ಧ ಕಿಡಿ ಕಾರಿದ್ದಾರೆ. ಈ ಮೂಲಕ ಬ್ರಹ್ಮಪುತ್ರ ನದಿಯ ಮೇಲೆ ಭಾರತಕ್ಕಿರುವ ಹಕ್ಕಿನ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹಿರಿಯ ಸಹಾಯಕ ರಾಣಾ ಇಹ್ಸಾನ್ ಅಫ್ಜಲ್, ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ರೀತಿಯಲ್ಲಿಯೇ, ಚೀನಾ ಕೂಡ ಬ್ರಹ್ಮಪುತ್ರ ನದಿಯ ಹರಿವನ್ನು ಸ್ಥಗಿತಗೊಳಿಸುವ ಮೂಲಕ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಕ್ಕೆ ಶರ್ಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬ್ರಹ್ಮಪುತ್ರ ಭಾರತದಲ್ಲಿ ಬೆಳೆಯುವ ನದಿ – ಕುಗ್ಗುವುದಿಲ್ಲ..

ಚೀನಾ ಭಾರತಕ್ಕೆ ಬ್ರಹ್ಮಪುತ್ರ ನೀರನ್ನು ನಿಲ್ಲಿಸಿದರೆ ಏನಾಗುತ್ತದೆ? ಪಾಕಿಸ್ತಾನದ ಹೊಸ ಬೆದರಿಕೆಯನ್ನು ನಿರೂಪಿಸಲಾಗುತ್ತಿದೆ. ಭಾರತವು ಹಳೆಯ ಸಿಂಧೂ ಜಲ ಒಪ್ಪಂದದಿಂದ ನಿರ್ಣಾಯಕವಾಗಿ ಹಿಂದೆ ಸರಿದ ನಂತರ, ಪಾಕಿಸ್ತಾನ ಈಗ ಮತ್ತೊಂದು ಸಿದ್ಧ ಬೆದರಿಕೆ ತಂತ್ರವನ್ನು ಹೆಣೆಯುತ್ತಿದೆ: ಚೀನಾ ಭಾರತಕ್ಕೆ ಬ್ರಹ್ಮಪುತ್ರ ನೀರನ್ನು ನಿಲ್ಲಿಸಿದರೆ ಏನಾಗುತ್ತದೆ? ಈ ಗೊಡ್ಡು ಪುರಾಣಕ್ಕೆ ಭಯದಿಂದಲ್ಲ, ಆದರೆ ಸತ್ಯ ಮತ್ತು ರಾಷ್ಟ್ರೀಯ ಗುರಿಯೊಂದಿಗೆ ಉತ್ತರಿಸೋಣ. ಬ್ರಹ್ಮಪುತ್ರ ಭಾರತದಲ್ಲಿ ಬೆಳೆಯುವ ನದಿ – ಕುಗ್ಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಬ್ರಹ್ಮಪುತ್ರ ಭಾರತವನ್ನು ಪ್ರವೇಶಿಸಿದ ನಂತರ ಉಕ್ಕಿ ಹರಿಯುತ್ತಿದೆ. ಬ್ರಹ್ಮಪುತ್ರದ ಒಟ್ಟು ಹರಿವಿನಲ್ಲಿ ಚೀನಾಗೆ ಕೇವಲ ಶೇಕಡಾ 30ನ ರಿಂದ 35ರಷ್ಟು ಕೊಡುಗೆ ನೀಡುತ್ತದೆ, ಹೆಚ್ಚಾಗಿ ಹಿಮನದಿ ಕರಗುವಿಕೆ ಮತ್ತು ಸೀಮಿತ ಟಿಬೆಟಿಯನ್ ಮಳೆಯ ಮೂಲಕ ತನ್ನ ವ್ಯಾಪ್ತಿಯಲ್ಲಿ ಹರಿಯುತ್ತದೆ ಎಂದು ತಿಳಿಸಿದ್ದಾರೆ. ಬ್ರಹ್ಮಪುತ್ರ ನದಿ ಬಗ್ಗೆ ಪಾಕಿಸ್ತಾನ ಅನಗತ್ಯ ಭಯ ಹುಟ್ಟಿಸುವುದನ್ನು ನಿಲ್ಲಿಸಬೇಕು” ಎಂದು ಕಿಡಿಕಾರಿದ್ದಾರೆ. ಚೀನಾ ಬ್ರಹ್ಮಪುತ್ರ ನದಿ ವಿವಾದ ಕೆಣಕುವುದಕ್ಕೂ, ಪಾಕಿಸ್ತಾನಕ್ಕೆ ಸಿಂಧೂ ನದಿ ನೀರಿನ ಹರಿವನ್ನು ಭಾರತ ನಿಲ್ಲಿಸುವುದಕ್ಕೂ ವ್ಯತ್ಯಾಸವಿದೆ ಎಂದು ಅಸ್ಸಾಂ ಸಿಎಂ ಸ್ಪಷ್ಟಪಡಿಸಿದ್ದಾರೆ.

ಬ್ರಹ್ಮಪುತ್ರ ಭಾರತದಲ್ಲಿ 65 ರಿಂದ 70ರಷ್ಟು ಹರಿಯುತ್ತದೆ..

ಅಲ್ಲದೆ ಇನ್ನುಳಿದ ಶೇಕಡಾ 65 ರಿಂದ 70ರಷ್ಟು ಭಾರತದಲ್ಲಿ ಹರಿಯುತ್ತದೆ. ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಧಾರಾಕಾರ ಮಳೆಯೇ ಬೀಳುವುದೇ ಪ್ರಮುಖ ಕಾರಣವಾಗಿದೆ. ಸುಬನ್ಸಿರಿ, ಲೋಹಿತ್, ಕಾಮೆಂಗ್, ಮಾನಸ್, ಧನ್ಸಿರಿ, ಜಿಯಾ-ಭರಾಲಿ, ಕೊಪಿಲಿ ಮುಂತಾದ ಪ್ರಮುಖ ಉಪನದಿಗಳು ಇದರಲ್ಲಿವೆ. ಅಲ್ಲದೆ ಕೃಷ್ಣೈ, ದಿಗಾರು ಮತ್ತು ಕುಲ್ಸಿಯಂತಹ ನದಿಗಳ ಮೂಲಕ ಖಾಸಿ, ಗಾರೊ ಮತ್ತು ಜೈನ್ತಿಯಾ ಬೆಟ್ಟಗಳಿಂದ ಹೆಚ್ಚುವರಿ ಒಳಹರಿವಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ.

ಜಲವಿಜ್ಞಾನದ ದತ್ತಾಂಶವನ್ನು ಉಲ್ಲೇಖಿಸಿ, ಭಾರತ-ಚೀನಾ ಗಡಿಯಲ್ಲಿ ನದಿಯ ಹರಿವು ಸೆಕೆಂಡಿಗೆ ಸರಾಸರಿ 2,000 ರಿಂದ 3,000 ಘನ ಮೀಟರ್‌ಗಳ ನಡುವೆ ಇದ್ದರೂ, ಮಾನ್ಸೂನ್ ಸಮಯದಲ್ಲಿ ಅಸ್ಸಾಂನಲ್ಲಿ ಅದು ಸೆಕೆಂಡಿಗೆ 15,000-20,000 ಘನ ಮೀಟರ್‌ಗಳಿಗೆ ಹೆಚ್ಚಾಗುತ್ತದೆ, ಇದು ನದಿಯ ಪ್ರಮಾಣಕ್ಕೆ ಭಾರತದ ಪ್ರಮುಖ ಕೊಡುಗೆಗೆ ಸಾಕ್ಷಿಯಾಗಿದೆ” ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ

ಚೀನಾ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ..

ಈ ನದಿಯು ಮಳೆಯಾಧಾರಿತ ಭಾರತೀಯ ನದಿ ವ್ಯವಸ್ಥೆಯಾಗಿದ್ದು, ಈ ಪ್ರದೇಶವನ್ನು ಪ್ರವೇಶಿಸಿದ ನಂತರ ಇನ್ನಷ್ಟು ಒಡಲುಗಳು ಸೇರಿಕೊಂಡು ಗಟ್ಟಿಯಾಗುತ್ತದೆ, ಆದ್ದರಿಂದ ಇದು ಮೇಲ್ಮುಖ ಹರಿವಿನ ಮೇಲೆ ಅವಲಂಬಿತವಾಗಿಲ್ಲ. ಚೀನಾ ನೀರಿನ ಹರಿವನ್ನು ಕಡಿಮೆ ಮಾಡಿದರೂ ಅಂದರೆ ಚೀನಾ ಯಾವುದೇ ಅಧಿಕೃತ ವೇದಿಕೆಯಲ್ಲಿ ಎಂದಿಗೂ ಬೆದರಿಕೆ ಹಾಕಿಲ್ಲ. ಇದರಿಂದ ಭಾರತದ ಅಸ್ಸಾಂನಲ್ಲಿ ವಾರ್ಷಿಕ ಪ್ರವಾಹವನ್ನು ತಗ್ಗಿಸಲು ಸಹಾಯ ಮಾಡುತ್ತದೆ, ಇದು ಪ್ರತಿ ವರ್ಷ ಲಕ್ಷಾಂತರ ಜನರನ್ನು ಸ್ಥಳಾಂತರಿಸುತ್ತದೆ ಮತ್ತು ಜೀವನೋಪಾಯವನ್ನು ನಾಶಪಡಿಸುತ್ತದೆ ಎಂದು ಅವರು ವಿವರಿಸಿರುವುದು ಇದೀಗ ದೇಶದ ಗಮನ ಸೆಳೆಯುವಂತೆ ಮಾಡಿದೆ.

ಏನಿದು ಸಿಂಧೂ ನದಿ ನೀರು ಒಪ್ಪಂದ..?

ಭಾರತವು ಇಂಡಸ್ ವಾಟರ್ಸ್ ಟ್ರೀಟಿ 1960 ಅನ್ನು ಸ್ಥಗಿತಗೊಳಿಸಿದ್ದರಿಂದ ಪಾಕಿಸ್ತಾನದಲ್ಲಿ ನೀರಿನ ಕೊರತೆ ಉಂಟಾಗಿದೆ. ಪಹಲ್ಗಾಮ್ ದಾಳಿಗೆ ಪಾಕಿಸ್ತಾನದ ಬೆಂಬಲವೇ ಕಾರಣ ಎಂದು ಆರೋಪಿಸಲಾಗಿತ್ತು. ಒಪ್ಪಂದದ ಪ್ರಕಾರ, ಇಂಡಸ್ ನದಿ ವ್ಯವಸ್ಥೆಯ ನೀರಿನಲ್ಲಿ ಭಾರತಕ್ಕೆ ಶೇಕಡಾ 20 ರಷ್ಟು ಮತ್ತು ಪಾಕಿಸ್ತಾನಕ್ಕೆ ಉಳಿದ ಶೇಕಡಾ 80ರಷ್ಟು ನೀರು ಸಿಗುತ್ತದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯಾನಕ ದಾಳಿ ಸಂಭವಿಸಿತು. ಭಯೋತ್ಪಾದಕರು ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ 25 ಭಾರತೀಯ ಪ್ರಜೆಗಳು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಕೊಂದರು. ಅಲ್ಲದೆ ಹಲವರು ಗಾಯಗೊಂಡರು. ಹೀಗಾಗಿ ಸಿಂಧೂ ನದಿ ನೀರು ಒಪ್ಪಂದ ರದ್ದುಗೊಳಿಸಲಾಗಿತ್ತು.

- Advertisement -

Latest Posts

Don't Miss