ನವಲಗುಂದ: ಆಸ್ಪತ್ರೆಯಲ್ಲಿ ವೈದ್ಯರು ಮಾಡುವ ಯಡವಟ್ಟಿನಿಂದಾಗಿ ರೋಗಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಆದರೆ ಇಲ್ಲಿ ಅನಾರೋಗ್ಯದಿಂಧ ಬಳಲುತ್ತಿರವ ವ್ಯಕ್ತಿಯನ್ನು ಸರಿಯಾಗಿ ಪರೀಕ್ಷೆ ಮಾಡದೆ ಸತ್ತು ಹೋಗಿದ್ದಾನೆ ಎಂದು ಕುಟುಂಬಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ.
ನವಲಗುಂದ ಗ್ರಾಮದ ಸಿದ್ದಾಪುರ ಓಣಿಯ ಶಿವಪ್ಪ ಮಲ್ಲಪ್ಪ (56)ತೋಟದ ಎಂಬ ವ್ಯಕ್ತಿ ಅನಾರೋಗದ್ಯದಿಂದ ಬಳಲುತ್ತಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆಕ್ಸಿಜನ್ ಸಿಲೀಂಡರ್ ಮೂಲಕ ಉಸಿರಾಡುತ್ತಿದ್ದ ವ್ಯಕ್ತಿ ಸತ್ತು ಹೋಗಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ವೈದ್ಯರ ಖಚಿತತೆಯ ಮೇರೆಗೆ ಕುಟುಂಬಸ್ತರು ಸಂಭಂದಿಕರಿಗೆ ಶಿವಪ್ಪ ಮರಣ ಹೊಂದಿರುವ ವಿಷಯ ತಿಳಿಸಿ ಮಂಗಳವಾರ ಅಂತ್ಯ ಸಂಸ್ಕಾರ ಮಾಡುವುದಾಗಿ ನಿರ್ಧರಿಸಿದ್ದರು. ಆದರೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಶಿವಪ್ಪ ಉಸಿರಾಡಲು ಶುರುಮಾಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕುಟುಂಬಸ್ಥರು ಚಿಕಿತ್ಸೆ ಕೊಡಿಸಿದ್ದಾರೆ. ಪಲ್ಸ್ ರೇಟ್ ಕಡಿಮೆ ಇದ್ದು ಬುದುಕುಳಿಯುವುದು ಕಷ್ಟ ಎಂದಿದ್ದಾರೆ. ಆದರೂ ಛಲ ಬಿಡದ ಸಹೋದರ ಶಂಕ್ರಪ್ಪ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ
ವೈದ್ಯರು ದೇಹದಲ್ಲಿನ ಉಸಿರಾಟ ಪ್ರಮಾಣದ ಏರುಪೇರನ್ನ ಗಮನಿಸಿ ಅಗತ್ಯ ಚಿಕಿತ್ಸೆ ನೀಡಿದ್ದಾರೆ ಚಿಕಿತ್ಸೆಗೆ ಸ್ಪಂದಿಸುವ ಹಂತ ತಲುಪಿದ್ದಲ್ಲದೆ ಮಂಗಳವಾರ ಬೆಳಿಗ್ಗೆ ಶಿವಪ್ಪ ಮತ್ತೆ ಕಣ್ಣು ತೆರೆದಿದ್ದು ಅಚ್ಚರಿಗೆ ಕಾರಣವಾಗಿಬಿಟ್ಟಿದೆ.
Fake Gold: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ 25 ಲಕ್ಷ ವಂಚಿನೆ; ಆರೋಪಿಗಳ ಬಂಧನ..!
ಹುಚ್ಚವನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ..!