Saturday, July 5, 2025

Latest Posts

ನವರಾತ್ರಿ ಮೊದಲ ದಿನ ಶ್ರೀ ಬಂಡೆ ಮಹಾ೦ಕಾಳಿ ಅಲಂಕಾರ :

- Advertisement -

Dasara Special:

ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ದಿನಾಂಕ 26/09/2022ರಂದು ಸೋಮವಾರ, ಪವಿತ್ರ ದಿನಗಳಾದ ನವರಾತ್ರಿಯ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಹಸ್ತ ನಕ್ಷತ್ರ, ನವಗ್ರಹ ಹೋಮಗಳನ್ನೂ ಅತ್ಯ೦ತ ವೈಭೋಗದಿಂದ ಆಯೋಜಿಸಿದ್ದು ನವರಾತ್ರಿಯ ಮೊದಲನೇ ದಿನದಸಂದರ್ಭವಾಗಿ ಅಮ್ಮನವರಿಗೆ ೧೫೦ ವರ್ಷಗಳಿಂದ ನವರಾತ್ರಿಯ ಮೊದಲನೇದಿನ ಸತತವಾಗಿ ಇದೆ ರೀತಿಯಾದ ಅಲಂಕಾರವನ್ನು ಮಾಡಲಗುತ್ತದೆ ಇದು ಈ ದೇವಾಲಯದ ವಿಶೇಷವಾಗಿದೆ.ಹಾಗಾಗಿ ಬಂಡೆ ಮಹಾ೦ಕಾಳಿ ಅಮ್ಮನವರ ದರ್ಶನಭಾಗ್ಯಕ್ಕಾಗಿ ಸಾಲುಸಾಲಾಗಿ ಬೇರೆ ಬೇರೆ ಕಡೆಇಂದ ಭಕ್ತರು ಬಂದು ದೇವಿಯ ಮೂರ್ತಿಯನ್ನು ನೋಡಿ ಕಣ್ತುಂಬಿಕೊಂಡು ಪುನೀತರಾಗುತ್ತಾರೆ .

ಈ ದೇವಾಲಯವು ಕೆಂಪೇಗೌಡರು ಬೆಂಗಳೂರನ್ನು ಕಟ್ಟುವ ಮೊದಲೇ ನಿರ್ಮಾಣವಾಗಿತ್ತು ಎಂದು ಹೇಳುತ್ತಾರೆ ಈ ದೇವಾಲಯಕ್ಕೆ 600 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ .ಈ ದೇವಾಲಯಕ್ಕೆ ಮಂಗಳವಾರ ಮತ್ತು ಶುಕ್ರವಾರದಂದು ಹಾಗು ಅಮಾವಾಸ್ಯೆ ಹುಣ್ಣಿಮೆಯಂದು ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ  ಆ ದಿನಗಳಂದು ದೇವಿಗೆ ವಿಶೇಷವಾದ ಪೂಜೆಗಳನ್ನು ಮಾಡಲಾಗುತ್ತದೆ .ಈ ದೇವಾಲಯದಲ್ಲಿ ಮತ್ತೊಂದು ವಿಶೇಷವೆನೆಂದರೆ ಮಕ್ಕಳ ದೃಷ್ಟಿದೋಷ ಪರಿಹಾರ ಮಾಡಿಕೊಡಲಾಗುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಿಂಬೆಹಣ್ಣಿನ ದೀಪವನ್ನು ಬೆಳಗುತ್ತಾರೆ ಹಾಗು ಕನ್ನಡ ಚಲನಚಿತ್ರ ರಂಗದವರು ಈ ದೇವಲಯಕ್ಕೆ ಭೇಟಿನೀಡಿ ದೇವಿಗೆ ವಿಶೇಷವಾಗಿ ಪೂಜೆಸಲ್ಲಿಸುತ್ತಾರೆ .

ಕುಂಕುಮದ ಮಹತ್ವ :

ಈ ಹೂಗಳನ್ನು ದೇವರಿಗೆ ಅರ್ಪಿಸಬಾರದು :

ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರವಹಿಸಿ..!

- Advertisement -

Latest Posts

Don't Miss