Poltical news :
ಮೋದಿ ರಾಜ್ಯ ಪ್ರವಾಸ ಬೆನ್ನಲ್ಲೇ ಪಿಎಂ ಮೋದಿ ವಿರುದ್ಧ ಕಾಂಗ್ರೆಸ್ ಪಡೆ ಸಿಡಿದೆದ್ದಿದೆ. ‘ನ್ಯಾಯಬೇಕು ಮೋದಿ’ ಎಂಬ ಪೋಸ್ಟರ್ ಅನ್ನ ಸಿದ್ದರಾಮಯ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ರಿಲೀಸ್ ಮಾಡಿ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. #ನ್ಯಾಯಬೇಕು_ಮೋದಿ ಎಂಬ ಹ್ಯಾಶ್ ಟ್ಯಾಗ್ನಡಿ ಅಭಿಯಾನ ಶುರುಮಾಡಿದ್ದಾರೆ
ಗುತ್ತಿಗೆದಾರ ಸಂತೋಷ್ ಪಾಟೀಲ್ ಬದುಕಿದ್ದಾಗಲಂತೂ ನ್ಯಾಯ ಸಿಗ್ಲಿಲ್ಲ. ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿಯವರೇ? ಮೆಟ್ರೋ ಪಿಲ್ಲರ್ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟಿದ್ದಾರೆ. ಚೀಫ್ ಇಂಜಿನಿಯರ್ ಮೇಲೆ ಕ್ರಮ ಯಾವಾಗ ಮೋದಿಯವರೇ? ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಪ್ರಸಾದ್ ಮೃತಪಟ್ಟ. ಈ ಸಾವಿನ ಸರಣಿ ಕೊನೆಗಾಣಿಸುವವರು ಯಾರು ಮೋದಿಯವರೇ? ನಮ್ಮ ರೈತನ ನಂದಿನಿ ಮೇಲೆ ಗುಜರಾತ್ನ ಅಮುಲ್ ಕಣ್ಣು ಬಿದ್ದಿದೆ. ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ಬುದ್ಧಿ ಬಿಡುವುದು ಯಾವಾಗ? ಶರಾವತಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗೆ ಸಂದಿಸಿ ಪ್ರಧಾನಿಗಳೇ? ಎಂದು ಟ್ವೀಟ್ ಮೂಲಕ ಮೋದಿಗೆ ಹಲವು ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದಾರೆ.