ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ನಯನದಲ್ಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದ ಬಹುಬಾಷಾ ನಟಿ ನಯನ್ ತಾರಾ ನೀಡಿದ ಶಾಕಿಂಗ್ ನ್ಯೂಸ್ ಗೆ ಅಭಿಮಾನಿಗಳು ಬೇಸರವಾಗಿದ್ದಾರೆ.
ಮದುವೆ ಆದ್ಮೇಲೆ ಹೀರೋಯಿನ್‌ಗೆ ಡಿಮ್ಯಾಂಡ್ ಕಡಿಮೆ ಆಗುತ್ತೆ ಎನ್ನುವ ಕಾಲ ಒಂದಿತ್ತು. ಆದರೆ ಈಗ ಹಾಗಿಲ್ಲ. ಮದುವೆ ಆದಮೇಲು ಬ್ಯುಸಿಯಾಗಿರುವ ಸಾಕಷ್ಟು ನಟಿಯರು ಚಿತ್ರರಂಗದಲ್ಲಿದ್ದಾರೆ. ಅದರಲ್ಲೂ ನಯನತಾರಾ ಅಂತೂ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ವಿಗ್ನೇಷ್ ಅವರನ್ನು ಮದುವೆ ಆದ್ಮೇಲೂ ಈ ಬ್ಯೂಟಿ ಸಂಭಾವನೆ ಹೆಚ್ಚಿಸಿಕೊಂಡು ಮತ್ತಷ್ಟು ಬ್ಯುಸಿಯಾಗಿದ್ದಾರೆ.
ಆದ್ರೆ ಇದೀಗ ನಯನತಾರಾ ಬಳಗದಿಂದ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯಕ್ಕೆ, ಬ್ಯೂಟಿಗೆ ಬೋಲ್ಡ್ ಆಗದೇ ಇರೋರಿಲ್ಲ. ದೊಡ್ಡ ಫ್ಯಾನ್ ಭೇಸ್ ಹೊಂದಿರೋ ಸೌತ್ ಚೆಲುವೆ ನಯನತಾರ. ಬಹುಭಾಷಾ ನಟಿಯಾಗಿ ಸೈ ಎನಿಸಿಕೊಂಡಿರೋ ಲೇಡಿ ಸೂಪರ್ ಸ್ಟಾರ್, ಇತ್ತೀಚಿಗಷ್ಟೇ ನಿರ್ದೇಶಕ ವಿಘ್ನೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 19 ವರ್ಷಗಳಿಂದ ಚಿತ್ರರಂಗದಲ್ಲಿರುವ ನಟಿ ನಯನತಾರಾ, 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇಷ್ಟೊಂದು ಪೀಕ್ನಲ್ಲಿ ಇರುವಾಗ್ಲೆ ನಯನತಾರ ತನ್ನ ಸಿನಿ ಪಯಣಕ್ಕೆ ಗುಡ್ ಬೈ ಹೇಳೋ ನಿರ್ಧಾರ ತೆಗೆದುಕೊಂಡಿದ್ದಾರಂತೆ.
ಹೌದು ಬಹುಭಾಷಾ ನಟಿ ನಯನ್ ತಾರಾ ತಮಿಳಿನ ಹೆಸರಾಂತ ನಟಿ. ಸುಂದರ ಕಣ್ಣುಗಳಿಂದಲೇ ಕಣ್ಮಣ ಸೆಳೆಯುತ್ತಿದ್ದ ನಟಿ ನೋಟಕ್ಕೆ ಅಭಿಮಾನಿಗಳು ಫುಲ್ ಫ್ಲಾಟ್ ಆಗುತ್ತಿದ್ದರು. ಆದ್ರೆ ಇದೀಗ ಲೇಡಿ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಹೌದು ನಯನ್ ತಾರಾ ಬಳಗದಿಂದ ನಯನ್ ತಾರ ಇನ್ನು ಆಕ್ಟಿಂಗ್ ಮಾಡಲ್ಲ ಎಂಬ ಮಾತು ಕೇಳಿಬರುತ್ತಿದೆ.
ನಯನತಾರ ಚಿತ್ರರಂಗದಿಂದ ದೂರಾಗಿ ತನ್ನ ವೈವಾಹಿಕ ಬದಕಿಗೆ ತಮ್ಮನ್ನ ತಾವು ಅರ್ಪಿಸಿಕೊಳ್ಳೋ ಡಿಸೈಡ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಇದಕ್ಕೂ ಮೊದಲು ಈ ಹಿಂದೆಯೇ ನಟಿಸಲು ಒಪ್ಪಿಕೊಂಡ ಮೂರು ಬಿಗ್ ಸಿನಿಮಾಗಳನ್ನ ಕಂಪ್ಲೀಟ್ ಮಾಡುತ್ತಾರಂತೆ. ಈ ಸಿನಿಮಾಗಳ ನಂತರ ನಯನತಾರ ನಟನೆಗೆ ವಿದಾಯ ಹೇಳಲಿದ್ದಾರೆ ಅನ್ನೋ ಸುದ್ದಿ ಇದೀಗ ಹರಿದಾಡುತ್ತಿದೆ.
ಏನೇ ಅಗಲಿ ಅಭಿಮಾನಿಗಳಿಗೋಸ್ಕರವಾದ್ರು ನಯನತಾರ ತಮ್ಮ ಅಭಿಪ್ರಾಯ ಬದಲಾಯಿಸಲಿ ಅನ್ನೋದೆ ಫ್ಯಾನ್ಸ್ ಆಶಯ
‘ಸೆಪ್ಟಂಬರ್ 13′ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ ಮಮ್ಮುಟ್ಟಿ