Wednesday, December 11, 2024

Latest Posts

ನಂದಿಬೆಟ್ಟದಲ್ಲಿ ಗುಡ್ಡ ಕುಸಿತ: ಆತಂಕದಲ್ಲಿ ಗ್ರಾಮಸ್ಥರು:

- Advertisement -

Chikkaballapura News:

ಕರುನಾಡಿಗೆ  ಜಲಕಂಟಕವೇ ಎದುರಾಗಿದೆ. ಎಲ್ಲೆಡೆ ಧಾರಾಕಾರವಾಗಿ  ಎಡೆಬಿಡದೆ ಸುರಿಯುತ್ತಿರುವ  ಮಳೆಗೆ  ಜನ ಹೈರಾಣಾಗಿ ಹೋಗಿದ್ದಾರೆ. ಇತ್ತ ಪ್ರವಾಸಿ ತಾಣ ಗಳಿಗೂ  ಮಳೆ ಕಂಟಕ  ಎದುರಾಗಿದೆ. ಚಿಕ್ಕಬಳ್ಳಾಪುರದ ಪ್ರವಾಸಿಗರ ನೆಚ್ಚಿನ ತಾಣ ನಂದಿಬೆಟ್ಟದಲ್ಲಿ  ಗುಡ್ಡ  ಕುಸಿತ ವಾಗಿದೆ.  ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದಿದೆ ಎಂದು  ತಿ,ಳಿದು ಬಂದಿದೆ.ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತ ಆಗಿದೆ ಎನ್ನಲಾಗಿದೆ. ಬೃಹತ್ ಗಾತ್ರದ ಕಲ್ಲು ಬಂಡೆಗಳು ಮರಗಳು ಮಣ್ಣು ಸಮೇತ ಕೊಚ್ಚಿಕೊಂಡು ಬಂದಿವೆ. ಈ ಗುಡ್ಡ ಕುಸಿತ ಉಂಟಾದ ಭಾಗದಿಂದ ಝರಿಯಂತೆ ನೀರು ಹರಿದುಬರುತ್ತಲೇ ಇದೆ. 2 ಕಡೆಗಳಲ್ಲಿ ಗುಡ್ಡ ಕುಸಿತವಾಗಿರುವುದರಿಂದ ಸುಲ್ತಾನಪೇಟೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಕಲ್ಲು ಬಂಡೆಗಳು ಉರುಳಿ ಗ್ರಾಮಕ್ಕೆ ಬರುವ ಭೀತಿಯಲ್ಲಿದ್ದಾರೆ  ಜನ.

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಯುವತಿ ಬಲಿ

ಚಿತ್ರದುರ್ಗ: ಮಹಾ ಮಳೆಗೆ ಜನ ಜೀವನ ಅಸ್ತವ್ಯಸ್ತ

ಚಿತ್ರದುರ್ಗ: ಪೊಲೀಸ್ ಠಾಣೆಗೂ ಜಲದಿಗ್ಬಂಧನ

 

- Advertisement -

Latest Posts

Don't Miss