www.karnatakatv.net: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನ ತನಿಖಾ ಅಧಿಕಾರಿಗಳ ತಂಡ ಮುಂಬೈನಲ್ಲಿ ಬಾಲಿವುಡ್ ನಟ, ನಟಿಯರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಹಾಗೇ ಆರ್ಯನ್ ಖಾನ್ ನ್ನು ಬಂಧಿಸಲಾಗಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬoಧಿಸಿದoತೆ ಶಾರುಖ್ ಖಾನ್ ಮನೆಗೂ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಮುಂಜಾನೆ ಶಾರುಖ್ ಖಾನ್ ಪುತ್ರನ್ನು ಭೇಟಿಯಾಗಲು ಹೋಗಿದ್ದರು ಅದಾದ ನಂತರ ಕೆಲವು ಸಮಯದಲ್ಲಿ ಎನ್ ಸಿ ಬಿ ಶೋಧಕ್ಕಾಗಿ ದಾಳಿ ನಡೆಸಿದ್ದಾರೆ. ಪ್ರಸ್ತುತ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದು, ಹೈಕೋರ್ಟ್ ನಲ್ಲಿ ಅಕ್ಟೋಬರ್ 26ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಹಾಗೇ ಎನ್ ಸಿ ಬಿ ಇನ್ನೋಂದು ತಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆಯಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ. ಇದೇ ವೇಳೆ ಎನ್ ಸಿ ಬಿ ಅನನ್ಯಾ ಪಾಂಡೆಗೆ ಸಮನ್ಸ್ ಜಾರಿ ಮಾಡಿದೆ. ಆರೋಪಿ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಜೊತೆಗೆ ಆರ್ಯನ್ ಜಾಮೀನು ನೀಡಲು ವಿಶೇಷ ನ್ಯಾಯಾಲಯ ಬುಧವಾರ ನಿರಾಕರಿಸಿದೆ. ಆರ್ಯನ್ ಖಾನ್ ಇನ್ನೂ ಐದು ದಿನಗಳ ಕಾಲ ಕಸ್ಟಡಿಯಲ್ಲಿರಬೇಕಾಗಿದೆ ಎಂದು ಹೇಳಿದೆ.