ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಜಯದ ನಂತರ, ಜೆಡಿಯು ನಾಯಕ ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ 89 ಮತ್ತು ಜೆಡಿಯು 85 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದರೂ, ಅತಿದೊಡ್ಡ ಪಕ್ಷವಾದ ಬಿಜೆಪಿ ಈ ಬಾರಿ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವ ಸಾಧ್ಯತೆ ಜಾಸ್ತಿ.
ಫಲಿತಾಂಶದ ಬಳಿಕ ಅಮಿತ್ ಶಾ ಅಧ್ಯಕ್ಷತೆಯಲ್ಲಿ NDA ಸಭೆ ನಡೆದಿದ್ದು, ಬಿಜೆಪಿ 15–16 ಸಚಿವ ಸ್ಥಾನಗಳು ಮತ್ತು ಜೆಡಿಯು ಸುಮಾರು 14 ಸ್ಥಾನಗಳನ್ನು ಪಡೆಯುವುದು ಬಹುತೇಕ ಖಚಿತವಾಗಿದೆ. NDA ಮೈತ್ರಿ ಪಕ್ಷಗಳಾದ ಲೋಕ ಜನ್ ಶಕ್ತಿ ಪಕ್ಷಕ್ಕೆ 3, HAM ಪಕ್ಷಕ್ಕೆ 1 ಮತ್ತು ಉಪೇಂದ್ರ ಕುಶ್ವಾಹ ಅವರ RLSPಗೂ 1 ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.
6 ಶಾಸಕರಿಗೆ 1 ಸಚಿವ ಸ್ಥಾನ ಎನ್ನುವ ಸೂತ್ರವನ್ನು ಅನುಸರಿಸಲು ಚರ್ಚೆ ನಡೆದಿದೆ. ಒಟ್ಟು 202 ಸ್ಥಾನಗಳನ್ನು ಪಡೆದಿರುವ ಎನ್‌ಡಿಎ, ಬಿಹಾರ ರಾಜಕೀಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಪ್ರಮಾಣವಚನ ಸಮಾರಂಭ ನವೆಂಬರ್ 19 ಅಥವಾ 20ರಂದು ಗಾಂಭೀರ್ಯದಿಂದ ನಡೆಯುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ

