ಲೋಕಸಭಾ ಚುನಾವಣಾ ಮಹಾ ಸಮರ ಇದೀಗ ಮುಗಿದಿದೆ. ಕರ್ನಾಟಕ ಟಿವಿ ಮತದಾನೋತ್ತರ ಸಮೀಕ್ಷೆ ಪ್ರಕಾರ, 543 ಕ್ಷೇತ್ರಗಳಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿ ಮತ್ತೆ ಮೋದಿ ಅಧಿಕಾರಕ್ಕೆ ಬರಲಿದ್ದು ಎನ್ ಡಿಎ 275 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಇನ್ನು ಕಳೆದ ಬಾರಿಗಿಂತ ಯುಪಿಎ ಭಾರೀ ಚೇತರಿಕೆ ಕಾಣಲಿದೆ.
ಕಳೆದ ಬಾರಿ ಬಿಜೆಪಿ ಸ್ವತಂತ್ರವಾಗಿ 280 ಸ್ಥಾನಗಳಿಸಿ ಬಹುಮತ ಪಡೆದು ಬಿಜೆಪಿ ಅಧಿಕಾರ ಹಿಡಿದಿತ್ತು. ಆದ್ರೆ ಈ ಬಾರಿ ಕಡಿಮೆ ಸ್ಥಾನ ಗಳಿಸಲಿದ್ದು, ಆದ್ರೂ ಸಹ ಬಹುಮತದ ಕೊರತೆಯಾಗೋದಿಲ್ಲ.
ಕಳೆದ ಬಾರಿ ಕಳಪೆ ಸಾಧನೆ ಮಾಡಿ ಸೋತಿದ್ದ ಕಾಂಗ್ರೆಸ್ ಈ ಬಾರಿ ಉತ್ತಮ ಸಾಧನೆ ಮಾಡಿದೆ. ಆದ್ರೆ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು 154 ಸ್ಥಾನ ಗಳಿಸಿದೆ.
ಇನ್ನು ಬಿಜೆಡಿ,ಟಿಎಂಸಿ, ಟಿಆರ್ ಎಸ್ ಸೇರಿದಂತೆ ಇತರೆ ಪಕ್ಷಗಳು ಒಟ್ಟಾರೆ 114 ಸ್ಥಾನಗಳಲ್ಲಿ ಜಯ ಸಾಧಿಸಲಿವೆ.
ಯಾವ ಯಾವ ರಾಜ್ಯದಲ್ಲಿ ಯಾರು ಗೆಲುವು ಸಾಧಿಸಿದ್ದಾರೆ ಅನ್ನೋ ಕುರಿತು ಕರ್ನಾಟಕ ಟಿವಿ ಸಮೀಕ್ಷಾ ವರದಿಯ ಕಂಪ್ಲೀಟ್ ಡೀಟೇಲ್ಸ್ ತಿಳಿಯಲು ಈ ವಿಡಿಯೋ ತಪ್ಪದೇ ನೋಡಿ.