ನೀವು ಹೊಸ ಆಧಾರ್ ಕಾರ್ಡ್ ಮಾಡ್ಸಬೇಕಾ? ಹೇಗ್ ಮಾಡ್ಸೋದು ಗೊತ್ತಾಗ್ತಿಲ್ವಾ? ಚಿಂತೆ ಮಾಡದೇ ಈ ವಿಡಿಯೋ ನೋಡಿ. ಭಾರತೀಯ ನಾಗರಿಕರು ಹಾಗೂ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ ಪಡೆಯುವುದು ಅತ್ಯಂತ ಮಹತ್ವದ್ದಾಗಿದೆ.
12 ಅಂಕೆಯ ಈ ವಿಶಿಷ್ಟ ಗುರುತು ಸಂಖ್ಯೆ ಬ್ಯಾಂಕ್ ಖಾತೆ ತೆರೆಯುವುದು, ಮೊಬೈಲ್ ಸಿಮ್ ಪಡೆಯುವುದು, ಪಾಸ್ಪೋರ್ಟ್ ಅರ್ಜಿ ಸೇರಿದಂತೆ ಹಲವು ಸರ್ಕಾರಿ ಮತ್ತು ಖಾಸಗಿ ಸೇವೆಗಳ ಪ್ರಮುಖ ಗುರುತಿನ ದಾಖಲೆ ಆಗಿದೆ. ಹೊಸ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು UIDAI ನೀಡಿರುವ ಸರಳ ಹಂತಗಳು ಇಲ್ಲಿವೆ.
ಅರ್ಜಿದಾರರು ಮುಂದುವರಿಯಲು ಎರಡು ಆಯ್ಕೆಗಳಿವೆ. UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು ಅಥವಾ ಯಾವುದೇ ಅಪಾಯಿಂಟ್ಮೆಂಟ್ ಇಲ್ಲದೆ ನೇರವಾಗಿ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು.
ನೀವು ಆಧಾರ್ ನೋಂದಣಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಸಲ್ಲಿಸುತ್ತೀರಾ ಅಂದ್ರೆ ಆಧಾರ್‌ಗೆ ಅರ್ಜಿ ಸಲ್ಲಿಸಲು ಮೊದಲು ಅಗತ್ಯವಾದ ಗುರುತು ಮತ್ತು ವಿಳಾಸ ಪುರಾವೆಗಳಂತಹ ದಾಖಲೆಗಳನ್ನು ಸಿದ್ಧಪಡಿಸಬೇಕು. ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ನೋಂದಣಿ ಕೇಂದ್ರದಲ್ಲಿ ಸಲ್ಲಿಸುವ ದಾಖಲಾತಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ನಂತರ ಅಗತ್ಯ ಗುರುತು ಹಾಗೂ ವಿಳಾಸ ಪುರಾವೆ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಸಲ್ಲಿಸಬೇಕು.
ನಂತರ ದಾಖಲೆ ಪರಿಶೀಲನೆ ಪೂರ್ಣವಾದ ನಂತರ ಬೆರಳಚ್ಚುಗಳು, ಐರಿಸ್ ಸ್ಕ್ಯಾನ್, ಆಧಾರ್ ಕಾರ್ಡ್‌ಗಾಗಿ ಫೋಟೋ ಹೀಗೆ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ನೋಂದಣಿ ಪೂರ್ಣವಾದ ನಂತರ 14 ಅಂಕೆಯ ದಾಖಲಾತಿ ಸಂಖ್ಯೆಯ ಹೊಂದಿರುವ ಸ್ವೀಕೃತಿ ಚೀಟಿಯನ್ನು ನೀಡಲಾಗುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಆಧಾರ್ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಆಧಾರ್ ಕಾರ್ಡ್ ಬರುವವರೆಗೆ ಈ ಚೀಟಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಗತ್ಯ.
UIDAI ನಡೆಸುವ ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡುವ ವಿಧಾನ ನೋಡೋದಾದ್ರೆ ನಿಮ್ಮ ನಗರ / ಸ್ಥಳವನ್ನು ಆಯ್ಕೆ ಮಾಡಿ. ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ. ಮುಂದಿನ ಪುಟದಲ್ಲಿ ‘ಹೊಸ ಆಧಾರ್’ ಆಯ್ಕೆ ಮಾಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ.
ಸ್ವೀಕರಿಸಿದ OTP ಅನ್ನು ನಮೂದಿಸಿ “OTP ಪರಿಶೀಲಿಸಿ” ಕ್ಲಿಕ್ ಮಾಡಿ. ನಿವಾಸಿ ಪ್ರಕಾರ, ರಾಜ್ಯ, ನಗರ ಮತ್ತು ಆಧಾರ್ ಸೇವಾ ಕೇಂದ್ರವನ್ನು ಆಯ್ಕೆ ಮಾಡಿ. ವೈಯಕ್ತಿಕ ವಿವರಗಳನ್ನು ನಮೂದಿಸಿ, ಸಮಯದ ಸ್ಲಾಟ್ ಆಯ್ಕೆ ಮಾಡಿ. ವಿವರಗಳನ್ನು ಪರಿಶೀಲಿಸಿ ಅಪಾಯಿಂಟ್ಮೆಂಟ್ ಅನ್ನು ದೃಢೀಕರಿಸಿ.
ರಿಜಿಸ್ಟ್ರಾರ್ ನಡೆಸುವ ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡುವ ವಿಧಾನ ನೋಡೋದಾದ್ರೆ ‘ನೇಮಕಾತಿಯನ್ನು ಕಾಯ್ದಿರಿಸಲು ಮುಂದುವರಿಯಿರಿ’ ಆಯ್ಕೆ ಮಾಡಿ. ನಿವಾಸಿ ಪ್ರಕಾರ ಹಾಗೂ ಲಾಗಿನ್ ವಿಧಾನ (ಮೊಬೈಲ್ / ಇಮೇಲ್) ಆಯ್ಕೆ ಮಾಡಿ. OTP ಸ್ವೀಕರಿಸಿ ಹಾಗೂ ಪರಿಶೀಲಿಸಿ. ‘ಹೊಸ ದಾಖಲಾತಿ’ ಆಯ್ಕೆ ಮಾಡಿ ಹೆಸರು, ವಯಸ್ಸು, ಲಿಂಗ, ವಿಳಾಸ ಮತ್ತು ಸಂಪರ್ಕ ವಿವರಗಳನ್ನು ತುಂಬಿ. ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
ನಿಮ್ಮ ಅಪಾಯಿಂಟ್ಮೆಂಟ್ ಬುಕ್ ಆದ ನಂತರ ಸ್ವೀಕೃತಿ ಸ್ಲಿಪ್ ರಚನೆ ಆಗುತ್ತದೆ. ಈ ಸ್ಲಿಪ್ ಅನ್ನು ಮುದ್ರಿಸಿ ನೋಂದಣಿ ಕೇಂದ್ರಕ್ಕೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಇದೆ ರೀತಿ ಉಪಯುಕ್ತ ಮಾಹಿತಿಗಾಗಿ ನೋಡ್ತಾಯಿರಿ ಕರ್ನಾಟಕ ಟಿವಿ
ವರದಿ : ಲಾವಣ್ಯ ಅನಿಗೋಳ

