ಯುಜೀನ್ (ಯುಎಸ್ಎ): ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮೊದಲ ಬಾರಿಗೆ ವಿಶ್ವಚಾಂಪಿಯನ್ಶಿಪ್ನ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ 88.39 ಮೀ. ದೂರ ಎಸೆದು ಅಂತಿಮ ಸುತ್ತಿಗೆ ಲಗ್ಗೆ ಹಾಕಿದರು. ಇವರೊಂದಿಗೆ ಭಾರತದ ಮತ್ತೊರ್ವ ಜಾವಲಿನ್ ಅಥ್ಲೀಟ್ ರೋಹಿತ್ ಯಾದವ್ ಕೂಡ ಫೈನಲ್ ಅರ್ಹತೆ ಪಡೆದಿದ್ದರಿಂದ ಭಾರತಕ್ಕೆ ಐತಿಹಾಸಿಕ ದಿನವಾಯಿತು.
24 ವರ್ಷದ ನೀರಜ್ ಚೋಪ್ರಾ ಎ ಗುಂಪಿನ ಅರ್ಹತಾ ಸುತ್ತಿನಲ್ಲಿ 88.39 ಮೀ.ದೂರ ಎಸೆದು ವೃತ್ತಿ ಜೀವನದ ಮೂರನೆ ಅತ್ಯುತ್ತಮ ಪ್ರದರ್ಶನ ನೀಡಿದರು. ಮೂರು ಪ್ರಯತ್ನದ ಅರ್ಹತಾ ಸುತ್ತಿನಲ್ಲಿ ಮೊದಲ ಎಸೆತದಲ್ಲೇ ಅರ್ಹತೆ ಪಡೆದಿದ್ದರಿಂದ ಮತ್ತೆರಡು ಟ್ರಯಲ್ಗಳಲ್ಲಿ ಎಸೆಯಲಿಲ್ಲ.
ಬಿ ಗುಂಪಿನಲ್ಲಿ ಗ್ರೆನೆಡಾದ ಹಾಲಿ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ 89.91 ಮೀ. ದೂರ ಎಸೆದು ಮೊದಲ ಸ್ಥಾನ ಪಡೆದರು.ನೀರಜ್ ಚೋಪ್ರ ಎರಡನೆ ಸ್ಥಾನ ಪಡೆದರು.
2017ರ ಲಂಡನ್ ವಿಶ್ವ ಚಾಂಪಿಯನ್ಶಿಪ್ನಲ್ಲಿ 89.94ಮೀ. ದೂರ ಎಸೆದಿದ್ದು ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿತ್ತುಘಿ. ಆದರೆ ಫೈನಲ್ಲ್ಲಿ 82.26ಮೀ. ದೂರ ಎಸೆದು ಅರ್ಹತೆಗಿದ್ದ 83 ಮೀ. ದೂರ ಎಸೆಯದೆ ವಿÀಲರಾಗಿದ್ದರು.
ನಂತರ ಮೊಣಕೈ ನೋವಿಗೆ ಗುರಿಯಾದ ನೀರಜ್ 2019ರ ದೊಹಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ರ್ಪಸಲಿಲ್ಲ.
ನನ್ನ ಓಟದಲ್ಲಿ ಅಂಕುಡೊಂಕಿತ್ತು. ಸ್ವಲ್ಪ ಅಲುಗಾಡಿದೇನು ಆದರೂ ಅತ್ಯುತ್ತಮ ಎಸೆತವಾಗಿತ್ತು. ಜಾವೆಲಿನ್ ಎಸೆಯುವ ಒಳ್ಳೆಯ ಅಥ್ಲೀಟ್ಗಳಿದ್ದಾರೆ ಎಂದು ಒಲಿಂಪಿಕ್ ಚಾಂಪಿಯನ್ ಹೇಳಿದ್ದಾರೆ.
ಮತ್ತೊರ್ವ ಅಥ್ಲೀಟ್ ರೋಹಿತ್ ಯಾದವ್, ಬಿ ಗುಂಪಿನ ಅರ್ಹತಾ ಸುತ್ತಿನ ಮೊದಲ ಸುತ್ತಿನಲ್ಲಿ 80.42 ಮೀ.ದೂರ ಎಸೆದು 11ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ಕಳೆದ ತಿಂಗಳು ರಾಷ್ಟ್ರೀಯ ಅಂತಾರಾಜ್ಯ ಚಾಂಪಿಯನ್ಶಿಪ್ನಲ್ಲಿ 82.54 ಮೀ. ದೂರ ಎಸೆದು ಬೆಳ್ಳಿ ಪದಕದ ಜೊತೆ ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದರು.
ಇದು ಒಳ್ಳೆಯ ಆರಂಭ ಫೈನಲ್ನಲ್ಲಿ ಶೇ.100ರಷ್ಟು ಪ್ರಯತ್ನ ಹಾಕುತ್ತೇನೆ. ನೋಡೋಣ ಪ್ರತಿ ದಿನವೂ ವಿಭಿನ್ನವಾಗಿರುತ್ತದೆ. ನನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತೇನೆ. ಅಂತಿಮ ದಿನ ಯಾರು ದೂರ ಎಸೆಯುತ್ತಾರೆ ಅನ್ನೋದು ಗೊತ್ತಿಲ್ಲ ಎಂದರು ನೀರಜ್ ಹೇಳಿದ್ದಾರೆ.




