ವಿಶ್ವ ಅಥ್ಲೆಟಿಕ್ಸ್ :ಬೆಳ್ಳಿ ಗೆದ್ದು ಇತಿಹಾಸ ನಿಮಿರ್ಸಿದ ನೀರಜ್

ಯುಜೀನ್ (ಯುಎಸ್ಎ):ಭಾರತದ ಹೆಮ್ಮಯ ಅಥ್ಲೀಟ್ ನೀರಜ್ ಚೋಪ್ರ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಜೊತೆಗೆ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದ ಎರಡನೆ ಭಾರತೀಯ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಪುರುಷರ ಜಾವೆಲಿನ್ ವಿಭಾಗದ ಫೈನಲ್ ನಲ್ಲಿ ನೀರಜ್ ಚೋಪ್ರ ನಾಲ್ಕನೆ ಪ್ರಯತ್ನದಲ್ಲಿ 88.13ಮೀ. ದೂರ ಎಸೆದು ಎರಡನೆ ಸ್ಥಾನ ಪಡೆದರು. ಗ್ರೇನೆಡಾದ ಆ್ಯಂಡರ್ಸನ್ ಪೀಟರ್ಸ್ 90.54 ಮೀ. ದೂರ ಎಸೆದು ಚಿನ್ನದ ಪದಕ ಗೆದ್ದರು.

ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದ ಎರಡನೆ ಭಾರತೀಯ ಅಥ್ಲೀಟ್ ಎಂಬ ಗೌರವಕ್ಕೆ ಚಿನ್ನದ ಹುಡುಗ ನೀರಜ್ ಪಾತ್ರರಾಗಿದ್ದಾರೆ. 2003ರಲ್ಲಿ ಅಂಜು ಬಾಬಿ ಜಾರ್ಜ್ ಪ್ಯಾರಿಸ್ ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ನ ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದೀಗ 19 ವರ್ಷಗಳ ಬಳಿಕ ಭಾರತ ಪ್ರತಿಷ್ಠಿತ ಕ್ರೀಡಾಕೂದಲ್ಲಿ ಪದಕ  ಗೆದ್ದ ಸಾಧನೆ ಮಾಡಿದೆ.

About The Author